Home ಅಪಘಾತ ಬೆಳ್ತಂಗಡಿ; ಪುದುವೆಟ್ಟಿನಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಮೂವರಿಗೆ ಗಾಯ

ಬೆಳ್ತಂಗಡಿ; ಪುದುವೆಟ್ಟಿನಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಮೂವರಿಗೆ ಗಾಯ

0

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಖಂಡಿಗ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ಸೋಮವಯ ನಡೆದಿದೆ.
ಮಿಯಾರು ಕಡೆಯಿಂದ ಉಜಿರೆ ಕಡೆಗೆ ದೀಪಾ ಅವರು 12 ವರ್ಷದ ಪುತ್ರನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಖಂಡಿಗದ ತಿರುವಿನಲ್ಲಿ ಬೊಲ್ಮನಾರು ಕಡೆಯಿಂದ ಮಿಯಾರು ಕಡೆಗೆ ಬರುತ್ತಿದ್ದ ಪ್ರಶಾಂತ್ (37) ಅವರು ಚಲಾಯಿಸುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ರಸ್ತೆಯ ಬದಿಗೆ ಮಗುಚಿ ಬಿದ್ದಿವೆ. ಅಪಘಾತದಲ್ಲಿ ದೀಪಾ ಮೂವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ವೈದ್ಯರ ಸಲಹೆಯಂತೆ ದೀಪಾ ಅವರ‌ ಮಗನನ್ನು ಉಜಿರೆಯ ಕಾಸಗಿ ಆಸ್ಪತ್ರೆಗೆ ಮತ್ತು ಪ್ರಶಾಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version