
ಬೆಳ್ತಂಗಡಿ: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕೆಲಸ ಮಾಡುತ್ತಿದ್ದ ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ನಿವಾಸಿ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.11 ರಂದು ರಾತ್ರಿ ನಡೆದಿದೆ.ಕೆಲಸಕ್ಕೆ ರಜೆ ಹಾಕಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತಮ್ಮ ಸಂಬಂಧಿಕರು ಮತ್ತು ಸಹೋದರರೊಂದಿಗೆ ಉತ್ಸಾಹದಿಂದ ಇದ್ದ ಅವರು, ರಾತ್ರಿ ಸುಮಾರು 9.30 ರ ಸುಮಾರಿಗೆ ತಮ್ಮ ಮನೆಯ ಸಮೀಪದ ತೋಟದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.ಮೃತರು ತಂದೆ ಸೇಸಪ್ಪ ಗೌಡ, ತಾಯಿ ವನಜಾ, ಸಹೋದರ ಶೇಖರ್, ಸಹೋದರಿ ದಿವ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.