Home ಸ್ಥಳೀಯ ಸಮಾಚಾರ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅವ್ಯವಸ್ಥೆ : ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ, ಲೋಕೋಪಯೋಗಿ ಮುಖ್ಯ...

ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅವ್ಯವಸ್ಥೆ : ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ, ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಭೇಟಿ

0

ಬೆಳ್ತಂಗಡಿ;  ಕಳೆದ ಮೂರು ವರ್ಷಗಳಿಂದ ವಾಹನ ಸಂಚಾರರಿಗೆ, ನಾಗರಿಕರಿಗೆ ತಲೆ ನೋವಾಗಿ ಪರಿಣಮಿಸಿರುವ ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಿಲಿಗೂಡು-ಕುಪ್ಪೆಟ್ಟಿ-ಉಪ್ಪಿನಂಗಡಿ ಭಾಗದ ಹತ್ತು ಕಿಲೋಮೀಟರ್ ರಸ್ತೆಯು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ವಾಹನ ಸವಾರರು ಸಂಚರಿಸಲು ಅಸಾಧ್ಯವಾಗುವಷ್ಟರ ಮಟ್ಟಿಗೆ ತಲುಪಿದೆ.
ರಸ್ತೆಯ ದುರಸ್ತಿಯಬಗ್ಗೆ ಸ್ಥಳೀಯವಾಗಿ ನಾಗರಿಕ ಹೋರಾಟ ಸಮಿತಿ ರಚಿಸಲಾಗಿದ್ದು ಹೋರಾಟ ಸಮಿತಿಯ ಮುಖಂಡರುಗಳು
ಮಂಗಳೂರಿಗೆ ಬಂದ ವೇಳೆ ಲೋಕೋಪಯೋಗಿ ಇಲಾಖೆಯ ಚೀಫ್ ಇಂಜಿನಿಯರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ರಸ್ತೆ ದುರಸ್ತಿಗೆ ಅನುದಾನ‌ಒದಗಿಸುವಂತೆ ವಿನಂತಿಸಿದರು., ನಾಳೆಯೇ ಉನ್ನತ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ದಿನನಿತ್ಯ ಸಹಸ್ರಾರು ವಾಹನಗಳು ಸಾಗುವ ಈ ರಸ್ತೆಯು ಹಲವು ಶೈಕ್ಷಣಿಕ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಕಛೇರಿಗಳನ್ನು ಅವಲಂಬಿಸಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ಕಾರ್ಮಿಕರು ಸಹಿತ ಸಹಸ್ರಾರು ನಾಗರಿಕರು ಕಂಗಾಲಾಗಿದ್ದಾರೆ. ಹಲವು ಬಾರಿ ಜನಪ್ರತಿನಿಧಿಗಳ, ಅಧಿಕಾರಿ ವರ್ಗದ, ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಇಲ್ಲ.
ಈ ನಿಟ್ಟಿನಲ್ಲಿ ಜಾತಿ ಧರ್ಮ ಪಕ್ಷ ಭೇದವಿಲ್ಲದೆ ನಾಗರಿಕರು, ಜನಪ್ರತಿನಿಧಿಗಳು ಹಾಗೂ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವ ಸಂಕಲ್ಪ ಮಾಡಿ, ಇದೇ ನವೆಂಬರ್ 06 ರಂದು ಕಲ್ಲೇರಿ ಜಂಕ್ಷನ್ ನಲ್ಲಿ, ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ, ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಸಂಪೂರ್ಣ ಡಾಮರೀಕರಣ ಮಾಡಿ ವ್ಯವಸ್ಥಿತವಾದ ರಸ್ತೆ ಮಾಡಿ ಕೊಡುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂಬ ದಿಟ್ಟ ನಿಲುವು ಹೋರಾಟ ಸಮಿತಿ ಹೊಂದಿದೆ.
ಅಧಿಕಾರಿಗಳನ್ನು ಭೇಟಿಯಾದ‌
ನಿಯೋಗದಲ್ಲಿ ಜಿ.ಪಂಚಾಯಿತಿ ಮಾಜಿ ಸದಸ್ಯರಾದ ಶಾಹುಲ್ ಹಮೀದ್ ಕರಾಯ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಬಟ್ಲಡ್ಕ, ಪ್ರಧಾನ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ಉಪಾಧ್ಯಕ್ಷರಾದ ಆದಂ ಅಲ್ ಮದೀನಾ, ಅಬ್ದುರ್ರಹ್ಮಾನ್ ಬಂಡಸಾಲೆ, ಸ್ಥಳೀಯ ಜನ ಪ್ರತಿನಿಧಿಗಳಾದ ಅಯ್ಯೂಬ್ ಬಿಕೆ ಕರಾಯ, ಜಯ ವಿಕ್ರಮ ಕಲ್ಲಾಪು, ಯೂಸುಫ್ ಹಾಜಿ ಪೆದಮಲೆ, ಸುಲೈಮಾನ್ ಕರ್ಪಾಡಿ, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version