Home ಸ್ಥಳೀಯ ಸಮಾಚಾರ ಉಜಿರೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹೆಜ್ಜೇನು ಕಡಿತದಿಂದ ವ್ಯಕ್ತಿ ತೀವ್ರ ಅಸ್ವಸ್ಥ

ಉಜಿರೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹೆಜ್ಜೇನು ಕಡಿತದಿಂದ ವ್ಯಕ್ತಿ ತೀವ್ರ ಅಸ್ವಸ್ಥ

0
4

ಉಜಿರೆ: ಬೈಕ್‌ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಣಜದ ಹುಳುಗಳು ಕಡಿದು ತೀವ್ರ ಅಸ್ವಸ್ಥಗೊಂಡ ಘಟನೆ ಅರಳಿ-ಕಿರಿಯಾಡಿ ರಸ್ತೆಯಲ್ಲಿ ನಡೆದಿದೆ.

ಉಜಿರೆ ಓಡಲದ ದೊಂಪದ ಫಲ್ಕೆ ನಿವಾಸಿ ವಿಶ್ವನಾಥ ಎ. (45) ಗಾಯಾಳು. ಇವರು ಬೈಕ್‌ ನಲ್ಲಿ ಅರಳಿ–ಕಿರಿಯಾಡಿ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಕಣಜದ ಹುಳುಗಳು ಏಕಾಏಕಿ ದಾಳಿ ನಡೆಸಿವೆ. ಈ ವೇಳೆ ಮೈತುಂಬಾ ಹಲವಾರು ಹುಳುಗಳು ಕಡಿದ ಪರಿಣಾಮ ತೀವ್ರ ಅಸ್ವಸ್ಥಗೊಂಡು ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಣಜದ ಹುಳುಗಳು ಕಡಿದಿರುವುದರಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸದ್ಯ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here