Home ಬ್ರೇಕಿಂಗ್‌ ನ್ಯೂಸ್ ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ ಎಸ್.ಐ.ಟಿ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಚೇತನ್‌ಸಿಂಗ್ ರಾಥೋಡ್ ನೇಮಕ

ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ ಎಸ್.ಐ.ಟಿ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಚೇತನ್‌ಸಿಂಗ್ ರಾಥೋಡ್ ನೇಮಕ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಾಂಗಳದ ಕು. ಸೌಜನ್ಯ ಅವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆಗೆ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಚೇತನ್‌ಸಿಂಗ್ ರಾಥೋಡ್ ನೇಮಕಗೊಂಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಎನ್‌.ಶಶಿಕುಮಾರ್ ಅವರು ಎಸ್‌ಐಟಿಯಿಂದ ಹಿಂದೆ ಸರಿದ ಕಾರಣ ನೂತನ ಮುಖ್ಯಸ್ಥರಾಗಿ ಸಿಐಡಿಯ ಐಜಿಪಿ ಆಗಿರುವ ಚೇತನ್‌ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಲಾಗಿದೆ. ಎಸ್‌ಐಟಿ ಸದಸ್ಯರಾಗಿದ್ದ ವೆಂಕಟೇಶ್ ಪ್ರಸನ್ನ ಅವರು ಎಸ್‌ಐಟಿಯಿಂದ ಹಿಂದೆ ಸರಿದಿರುವುದರಿಂದ ಅವರ ಸ್ಥಾನಕ್ಕೆ ಹಾಸನ ಜಿಲ್ಲೆಯ ಎಎಸ್ಪಿ ಶ್ರೀನಿಧಿ ನೇಮಕಗೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version