Home ಸ್ಥಳೀಯ ಸಮಾಚಾರ ಮುಂಡಾಜೆಯಲ್ಲಿ  ಒಂಟಿ ಸಲಗ ದಾಂಧಲೆ ಕೃಷಿಗೆ ಹಾನಿ

ಮುಂಡಾಜೆಯಲ್ಲಿ  ಒಂಟಿ ಸಲಗ ದಾಂಧಲೆ ಕೃಷಿಗೆ ಹಾನಿ

3
0

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕೊಂಬಿನಡ್ಕ ಪ್ರದೇಶದಲ್ಲಿ ಒಂಟಿ ಸಲಗವೊಂದು ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿ ಕೃಷಿಗೆ ಹಾನಿ ಉಂಟುಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಇಲ್ಲಿನ ಸದಾಶಿವ ಮಲೆಕುಡಿಯ ಅವರ ಮನೆ ಸಮೀಪದವರೆಗೂ ಬಂದ ಒಂಟಿ ಸಲಗ, ಅವರ ತೋಟಕ್ಕೆ ನುಗ್ಗಿ 10ಕ್ಕೂ ಅಧಿಕ ಅಡಕೆ ಮರಗಳು, ಮೂರು ತೆಂಗಿನ ಮರಗಳು ಹಾಗೂ ಬಾಳೆ ಕೃಷಿಯನ್ನು ನಾಶಪಡಿಸಿದೆ. ರಾತ್ರಿ ವೇಳೆ ಏಕಾಏಕಿ ಮನೆಯ ಸಮೀಪಕ್ಕೆ ಆನೆ ಬಂದಿರುವುದರಿಂದ ಮನೆಯವರು ಆತಂಕಕ್ಕೊಳಗಾಗಿದ್ದಾರೆ.

ಆನೆ ಮನೆಯ ಅಂಗಳದ ಸಮೀಪದವರೆಗೂ ಬಂದಿರುವುದನ್ನು ಗಮನಿಸಿದ ಮನೆಯವರು ತಕ್ಷಣ ಪರಿಸರದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನೆರೆಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಪಟಾಕಿ ಸಿಡಿಸಿ ಆನೆಯನ್ನು ಅಲ್ಲಿಂದ ಓಡಿಸುವ ಪ್ರಯತ್ನ ನಡೆಸಿದ್ದು, ಅಂತಿಮವಾಗಿ ಸಲಗವನ್ನು ಸ್ಥಳದಿಂದ ದೂರ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

-ಮನೆ ಸಮೀಪವೇ ಕಾಡಾನೆ ಆತಂಕ-
ಒಂಟಿ ಸಲಗ ಜನವಸತಿ ಹಾಗೂ ಹೆದ್ದಾರಿ ಪ್ರದೇಶದವರೆಗೆ ಬಂದು ಕೃಷಿಗೆ ಹಾನಿ ಉಂಟುಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುವುದರ ಜತೆಗೆ, ಮನೆಗಳ ಸಮೀಪದವರೆಗೂ ಆನೆಗಳು ಬರುತ್ತಿರುವುದು ಜನರ ಸುರಕ್ಷತೆಯ ಬಗ್ಗೆಯೂ ಕಳವಳಕ್ಕೆ ಕಾರಣವಾಗಿದೆ.

ರಾತ್ರಿ ವೇಳೆ ಆನೆಗಳ ಸಂಚಾರ ಹೆಚ್ಚಾದರೆ ಮನೆಯಿಂದ ಹೊರಬರಲು ಕೂಡ ಸ್ಥಳೀಯರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

LEAVE A REPLY

Please enter your comment!
Please enter your name here