Home ಸ್ಥಳೀಯ ಸಮಾಚಾರ ಸೌಜನ್ಯ ಪ್ರಕರಣ; ನ್ಯಾಯಾಧೀಶರ ಮುಂದೆಯೇ ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿ ಸಂಗ್ರಹ

ಸೌಜನ್ಯ ಪ್ರಕರಣ; ನ್ಯಾಯಾಧೀಶರ ಮುಂದೆಯೇ ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿ ಸಂಗ್ರಹ

2
0

ಬೆಳ್ತಂಗಡಿ : ಧರ್ಮಸ್ಥಳ ದಲ್ಲಿ ನಡೆದ ಕಾಲೇಜ್ ವಿದ್ಯಾರ್ಥಿನಿ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಕು.ಸೌಜನ್ಯ ಕೊಲೆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ಮರುತನಿಖೆ ಆದೇಶದಂತೆ ಎಸ್ಐಟಿ ತಂಡ ತನಿಖೆ ನಡೆಸುತ್ತಿದ್ದು. ಇದೀಗ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿ ಬೆಳ್ತಂಗಡಿಗೆ ಆಗಮಿಸಿದ್ದಾರೆ.

ಮಂಗಳೂರು ಎಸ್ಐಟಿ ಕಚೇರಿಯಿಂದ ಸೌಜನ್ಯ ಪ್ರಕರಣದ ತನಿಖಾಧಿಕಾರಿ ಲೋಕೇಶ್.ಪಿ.ಜಗಲಾಸರ್ ಐಪಿಎಸ್ ಮತ್ತು ಎಸಿಪಿ ಮನೋಜ್ ಕುಮಾರ್ ನಾಯಕ್ ನೇತೃತ್ವದ ತಂಡ ಅ.23 ರಂದು ಸಂಜೆ ಬೆಳ್ತಂಗಡಿ ‌ನ್ಯಾಯಾಲಯಕ್ಕೆ‌ ಆಹಮಿಸಿದ್ದು ಸೌಜನ್ಯ ತಾಯಿ‌ಕುಸುಮಾವತಿ ಅವರನ್ನು ನ್ಯಾಯಾಲಯಕ್ಕೆ ಕರೆಸಿ ನ್ಯಾಯಧೀಶರ ಮುಂದೆಯೇ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸುವ ಕಾರ್ಯ ಮಾಡಿದ್ದಾರೆ. ಡಿ.ಎನ್. ಎ. ಪರೀಕ್ಷೆಗಾಗಿ ಅವರ ರಕ್ತದ ಮಾದರಿಗಳನ್ನು ಸಂಹ್ರಹಿಸಲಾಗಿರುವುದಾಗಿ ತಿಳಿದು ಬಂದಿದೆ.

ಬೆಳ್ತಂಗಡಿಯ ಜೆಎಮ್.ಎಫ್ ಸಿ ನ್ಯಾಯಾಲಯದ‌ ನ್ಯಾಯಾಧೀಶರ ಮುಂದೆ ಮುಚ್ಚಿದ ಕೊಠಡಿಯಲ್ಲಿ ರಕ್ತದ ಮಾದರಿಯ ಸಂಗ್ರಹ ಕಾರ್ಯವನ್ನು ಮಾಡಲಾಗಿದೆ. ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರ ತಂಡದಿಂದ ಕುಸುಮಾವತಿಯವರ ರಕ್ತದ ಮಾದರಿ(ಡಿಎನ್ಎ) ಸಂಗ್ರಹಿಸುವ ಕಾರ್ಯ ಮಾಡಲಾಗಿದೆ ಎಲ್ಲ ಕಾರ್ಯಗಳ‌ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನೂ ಮಾಡಲಾಗಿರುವುದಾಗಿ ತಿಳಿದು ಬಂದಿದೆ.
ರಕ್ತದ ಮಾದರಿಯನ್ನು ಸಿಲ್ ಮಾಡಿ ಎಸ್ಐಟಿ ಗೆ ನೀಡಿದ್ದು ಇನ್ನೂ ಎಫ್ಎಸ್ಎಲ್ ವಿಭಾಗಕ್ಕೆ ಕಳುಹಿಸಿ ವರದಿ ಎಸ್ಐಟಿ ಅಧಿಕಾರಿಗಳು ಪಡೆಯಲಿದ್ದಾರೆ.
ಸಂಜೆ 4:30 ಕ್ಕೆ ಬೆಳ್ತಂಗಡಿ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಆಗಮಿಸಿದ ಎಸ್.ಐ.ಟಿ‌‌ ತಂಡ‌ಆರು ಗಂಟೆಯ ಸುಮಾರಿಗೆ ತಮ್ಮ ಕೆಲಸಕಾರ್ಯ ಮುಗಿಸಿ ಹಿಂತಿರುಗಿದ್ದಾರೆ.
ಸುಪ್ರೀಂ ಕೋರ್ಟ್ ಮೂರು ತಿಂಗಳ‌ ಕಾಲಾವಕಾಶವನ್ನು ಮಾತ್ರ ಎಸ್.ಐ.ಟಿಗೆ ನೀಡಿದೆ. ಇಡೀ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸಬೇಕಾದ‌ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳ ಕಾಲ ಸತತ ಸಭೆಗಳನ್ನು ನಡೆಸಿ ಚರ್ಚಿಸಿ ತಂಡ ಇದೀಗ ತನಿಖಾ ಕಾರ್ಯ ಆರಂಭಿಸಿದೆ. ಕೆಲವೆ ದಿನಗಳಲ್ಲಿ ಇನ್ನಷ್ಟು ಅಧಿಕಾರಿಗಳ ತಂಡ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆಯಿದ್ದು ತನಿಖೆ ಚುರುಕುಗೊಳ್ಳಲಿದೆ.

LEAVE A REPLY

Please enter your comment!
Please enter your name here