Home ಅಪರಾಧ ಲೋಕ ಮಂಗಳೂರು; ಮಕ್ಕಳ‌ಮೇಲೆ ಲೈಂಗಿಕ ದೌರ್ಜನ್ಯ‌‌ ನಗರದ ಚರ್ಚ್ ನ ಧರ್ಮಗುರುವಿನ ವಿರುದ್ದ ಪ್ರಕರಣ‌ ದಾಖಲು

ಮಂಗಳೂರು; ಮಕ್ಕಳ‌ಮೇಲೆ ಲೈಂಗಿಕ ದೌರ್ಜನ್ಯ‌‌ ನಗರದ ಚರ್ಚ್ ನ ಧರ್ಮಗುರುವಿನ ವಿರುದ್ದ ಪ್ರಕರಣ‌ ದಾಖಲು

4
0

ಮಂಗಳೂರು: ಚರ್ಚಿಗೆ ಪ್ರಾರ್ಥನೆಗೆಂದು ಬರುತ್ತಿದ್ದ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನಗರದ ಚರ್ಚ್ ವೊಂದರ ಧರ್ಮಗುರು ಸಿಪ್ರಿಯನ್ ಪಿಂಟೋ ಎಂಬವರ ವಿರುದ್ಧ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಫಾ.ಸಿಪ್ರಿಯನ್ ಪಿಂಟೋ ವಿರುದ್ಧ ಸಂತ್ರಸ್ತರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಅದರಂತೆ ರಕ್ಷಣಾ ನಿರ್ದೇಶನಾಲಯವು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ದ.ಕ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸೂಚನೆ ನೀಡಿತ್ತು.

ಅಲ್ಲದೆ ಮೈಸೂರಿನ ಒಡನಾಡಿ ಸಂಸ್ಥೆ ಕೂಡ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹಿಸಿತ್ತು.

ಈ ಮಧ್ಯೆ ಸಂತ್ರಸ್ತ ಬಾಲಕನೋರ್ವ ನೀಡಿದ ದೂರಿನಂತೆ ಆರೋಪಿ ಫಾ.ಸಿಪ್ರಿಯನ್ ಪಿಂಟೋ ವಿರುದ್ಧ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here