ಬೆಳ್ತಂಗಡಿ: ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ(ಸಿ.ಎಂ ಕಪ್) ನಲ್ಲಿ ಮುಂಡಾಜೆ ನಿವಾಸಿ ತೇಜಲ್ ಕೆ.ಆರ್ ಅವರು 110 ಮೀ ಹರ್ಡಲ್ಸ್ ನಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದು ಕೊಂಡಿದ್ದಾರೆ
ಮುಂಡಾಜೆ ನಿವಾಸಿ ರಾಜೇಶ್ ಕೆ.ವಿ ಹಾಗೂ ಜಿನ್ಸಿ ದಂಪತಿಯರ ಪುತ್ರ ತೇಜಲ್ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪದವಿ ವಿದ್ಯಾರ್ಥಿ ಯಾಗಿದ್ದು ತರಬೇತುದಾರರಾದ ಶಾಂತರಾಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
