Home ಸ್ಥಳೀಯ ಸಮಾಚಾರ 2027 ಮಾರ್ಚ್ 19 – 28; ಕಾಜೂರು ಮಖಾಂ ಉರೂಸ್ ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್,...

2027 ಮಾರ್ಚ್ 19 – 28; ಕಾಜೂರು ಮಖಾಂ ಉರೂಸ್ ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಎ.ಪಿ ಉಸ್ತಾದ ರಿಂದ ದಿನಾಂಕ ಘೋಷಣೆ  ಪೋಸ್ಟರ್ ಬಿಡುಗಡೆ

0

ಬೆಳ್ತಂಗಡಿ; ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ಕಾಜೂರು ಮಖಾಂ ಶರೀಫ್ ಉರೂಸ್ ಕಾರ್ಯಕ್ರಮವು 2027 ಮಾರ್ಚ್ 19 ರಿಂದ 28 ರ ವರೆಗೆ ನಡೆಯಲಿದೆ.‌
ಖಾಝಿ ಶೈಖುನಾ ಸುಲ್ತಾನುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಅವರ ನೇತೃತ್ವದಲ್ಲಿ, ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದೊಂದಿಗೆ ನಡೆಯುವ ಈ ಆಧ್ಯಾತ್ಮಿಕ ಅನುಭೂತಿಯ ಕಾರ್ಯಕ್ರಮಗಳ ಅಧಿಕೃತ ಘೋಷಣೆಯನ್ನು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಗೌರವಾಧ್ಯಕ್ಷರೂ, ಸಮಸ್ತ ಕೇರಳ ಕೇಂದ್ರ ಮುಶಾವರ ಉಪಾಧ್ಯಕ್ಷರೂ ಆದ ಖುದುವತುಸ್ಸಾದಾತ್ ಅಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ದಿನಾಂಕ
ಪ್ರಕಟಿಸಿ, ಪೋಸ್ಟರ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅಸಯ್ಯದ್ ಮುಖ್ತಾರ್ ತಂಙಳ್ ಉಪಸ್ಥಿತರಿದ್ದರು ಬಳಿಕ ನಿಯೋಗ ಮರ್ಕಝ್ ನಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಅವರನ್ನೂ ಭೇಟಿ ಮಾಡಿ ಖಾಝಿಯವರಿಂದ ಉರೂಸ್ ಗೆ ನಿರ್ದೇಶನ ಪಡೆದರು.

ಈ ಉರೂಸ್ ಕಾರ್ಯಕ್ರಮವು ಕಾಜೂರು ಮತ್ತು ಕಿಲ್ಲೂರು ಜಂಟಿ ಆಶ್ರಯದಲ್ಲಿ ಸಂಪ್ರದಾಯಬದ್ಧವಾಗಿ ಗತ ವೈಭವ ಮರುಕಳಿಸುವಂತೆ ವಿಜೃಂಬಣೆಯಿಂದ ನಡೆಸುವುದಾಗಿ ಸಯ್ಯಿದ್ ಕುಂಬೋಳ್ ತಂಙಳ್ ತಿಳಿಸಿದರು.

ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ದರ್ಗಾ ಶರೀಫ್ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ‌.ಎಚ್ ಅಬೂಬಕ್ಕರ್ ಸಿದ್ದೀಕ್, ಕೋಶಾದಿಕಾರಿ DY ಉಮ್ಮರ್ ಕುಕ್ಕಾವು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್, ಪ್ರಮುಖರಾದ ಅಬೂಬಕ್ಕರ್ ಮಲ್ಲಿಗೆ, ಕೆ.ಯು ಮುಹಮ್ಮದ್ ಸಖಾಫಿ ಕಾಜೂರು, ಮುಹಮ್ಮದ್ ಶರೀಫ್ ಸ‌ಅದಿ ದಿಡುಪೆ, ಬದ್ರುದ್ದೀನ್ ಕಿಲ್ಲೂರ್, ಅಶ್ರಫ್ ಕಿಲ್ಲೂರ್ ಮುಂತಾದವರು
ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version