Home ಸ್ಥಳೀಯ ಸಮಾಚಾರ ಗುರುವಾಯನಕೆರೆ ಗಣೇಶೋತ್ಸವ ಸಮಿತಿ ವತಿಯಿಂದ ಕೃಷಿ ವಿಜ್ಞಾನದಲ್ಲಿ 53ನೇ ರ‍್ಯಾಂಕ್ ಪಡೆದ ಗುರುವಾಯನಕೆರೆ ಕೊಂಟುಪಲ್ಕೆ ನಿವಾಸಿ...

ಗುರುವಾಯನಕೆರೆ ಗಣೇಶೋತ್ಸವ ಸಮಿತಿ ವತಿಯಿಂದ ಕೃಷಿ ವಿಜ್ಞಾನದಲ್ಲಿ 53ನೇ ರ‍್ಯಾಂಕ್ ಪಡೆದ ಗುರುವಾಯನಕೆರೆ ಕೊಂಟುಪಲ್ಕೆ ನಿವಾಸಿ ಕು.ನಿಧಿತಾ ಬಂಗೇರ ಅವರಿಗೆ ಸನ್ಮಾನ

0

ಗುರುವಾಯನಕೆರೆ : (ಅ. 06) ಗುರುವಾಯನಕೆರೆ ಕೊಂಟುಪಲ್ಕೆ ನಿವಾಸಿ ಆನಂದ ಮತ್ತು ಶ್ರೀಮತಿ ಪ್ರತಿಮಾ ದಂಪತಿಗಳ ಮಗಳಾದ ಕುಮಾರಿ ನಿಧಿತ ಬಂಗೇರ ಇವರು ಕೃಷಿ ವಿಜ್ಞಾನ ವಿಭಾಗದಲ್ಲಿ ಸುಮಾರು 5,000. ವಿದ್ಯಾರ್ಥಿಗಳ ಪೈಕಿ 53ನೇ ರಾಂಕ್ ಗಳಿಸಿ ಅಮೋಘ ಸಾಧನೆ ಮಾಡಿದ ಇವರಿಗೆ ಗುರುವಾಯನಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅಕ್ಟೋಬರ್ 06 ರಂದು ಅವರ ನಿವಾಸದಲ್ಲಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿಗುರುವಾಯನಕೆರೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಾದ ರಿಜೇಶ್ ಕುಮಾರ್ ಗುರುವಾಯನಕೆರೆ, ಸಮಿತಿ ಅಧ್ಯಕ್ಷರಾದ ಜೀವನ್ ಕುಲಾಲ್, ಗಣೇಶ್ ಕುಲಾಲ್ ಜಿ.ಕೆರೆ, ರವಿ ಸಪಲ್ಯ ಅಮರ್ ಜಾಲ್, ರವೀಂದ್ರ ಶೆಟ್ಟಿ ಪನೆಜಾಲ್, ಪ್ರದೀಪ್ ಶೆಟ್ಟಿ ಶಕ್ತಿನಗರ, ರಂಜಿತ್ ಮದ್ದಡ್ಕ, ಪ್ರೇಮ್ ಶೆಟ್ಟಿ ಗುಂಪಲಾಜೆ, ಗುರುಪ್ರಸಾದ್ ಶೇಷಗಿರಿ,ಪ್ರಶಾಂತ್ ಕುಲಾಲ್ ಜಿ.ಕೆರೆ, ಶ್ರೀರಾಜ್ ಶೆಟ್ಟಿ ಶಕ್ತಿನಗರ ಸಚಿನ್ ಶೆಟ್ಟಿ ಪಡ್ಯಾರ್, ಮುಕೇಶ್ ಕುಲಾಲ್ ಗುರುವಾಯನಕೆರೆ, ಅರುಣ್ ಅಮರ್ ಜಾಲ್ ಹಾಗು ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಹಾಗೂ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version