Home ಅಪರಾಧ ಲೋಕ ಬೆಳ್ತಂಗಡಿ : ನಾಲ್ಕೂರಿನಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಬೆಳ್ತಂಗಡಿ : ನಾಲ್ಕೂರಿನಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

3
0

ಬೆಳ್ತಂಗಡಿ : ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆಯಾದ ಘಟನೆ ಸೆ. 28 ರಂದು ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ನಾಲ್ಕೂರು ಗ್ರಾಮದ ಪಾಡಿ ನಿವಾಸಿ ವಿನೋದ ಎಂಬವರ ಕೃಷಿ ತೋಟದ ಕಣಿಯ ಬಳಿ ಅಪರಿಚಿತ ವ್ಯಕ್ತಿಯ ತಲೆ ಬರುಡೆ, ಎಲುಬು, ವಸ್ತ್ರ ಸಹಿತ ಮಾನವನ ಅಸ್ಥಿಪಂಜರ ಪತ್ತೆಯಾಗಿದ್ದು.

ವಿನೋದ ಎಂಬವರ ಜಾಗವನ್ನು ತಮ್ಮ ನಾಲ್ಕೂರು ಗ್ರಾಮದ ಮಜ್ಜೆನಿಬೈಲು ಪಾಡಿ ನಿವಾಸಿ ಸುರೇಶ್ ಎಂಬವರು ನೋಡಿಕೊಳ್ಳುತ್ತಿದ್ದು. ತೋಟವನ್ನು ಮೇಷಿನ್ ಮೂಲಕ ಸ್ವಚ್ಛಮಾಡುತ್ತಿರುವಾಗ ಅಸ್ಥಿಪಂಜರ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here