Home ಸ್ಥಳೀಯ ಸಮಾಚಾರ ಹೈ ಕೋರ್ಟ್ ನಲ್ಲಿ ಬೆಳ್ತಂಗಡಿ ಮೂಲದ  ನ್ಯಾಯಮೂರ್ತಿ  ಉಷಾರಾಣಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬೆಳ್ತಂಗಡಿಯ...

ಹೈ ಕೋರ್ಟ್ ನಲ್ಲಿ ಬೆಳ್ತಂಗಡಿ ಮೂಲದ  ನ್ಯಾಯಮೂರ್ತಿ  ಉಷಾರಾಣಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬೆಳ್ತಂಗಡಿಯ ವಕೀಲರು ಭಾಗಿ

0

ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಯಾಗಿ ನೇಮಕಗೊಂಡ ಬೆಳ್ತಂಗಡಿ ಮೂಲದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಕರ್ನಾಟಕದ ಗೌವರಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ಮುಖ್ಯ ನ್ಯಾಯಮೂರ್ತಿಗಳಾದ ವಿಭು ಭಕ್ರು, ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹಮದ್ ರವರ ಉಪಸ್ಥಿತಿಯಲ್ಲಿ ಲೋಕ ಭವನದ ಗಾಜಿನ ಮನೆಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಅಲೋಶಿಯಸ್ ಎಸ್ ಲೋಬೋ, ಹಿರಿಯ ವಕೀಲರ ಸಮಿತಿ ಅಧ್ಯಕ್ಷರಾದ ಶಿವಕುಮಾರ್ ಎಸ್ ಎಂ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ, ಹಿರಿಯ ವಕೀಲರುಗಳಾದ ಪ್ರತಾಪ ಸಿಂಹ ನಾಯಕ್, ಬಿ ಕೆ ಧನಂಜಯ ರಾವ್, ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್, ಮಾಜಿ ಅಧ್ಯಕ್ಷರುಗಳಾದ ವಸಂತ ಮರಕಡ, ಶಶಿ ಕಿರಣ್ ಜೈನ್, ಮಾಜಿ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಪ್ರವೀಣ್ ಕುಮಾರ್, ಶ್ರೀಮತಿ ಜ್ಯೋತಿ ಪಿ ನಾಯಕ್ ಮತ್ತು ರಾಜಶ್ರೀ ಡಿ ರಾವ್ ಜೊತೆಗಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version