Home ಅಪಘಾತ ತೋಟತ್ತಾಡಿ ಸಿಡಿಲು ಬಡಿದು ಹಾನಿ

ತೋಟತ್ತಾಡಿ ಸಿಡಿಲು ಬಡಿದು ಹಾನಿ

2
0

ಬೆಳ್ತಂಗಡಿ: ತಾಲೂಕಿನ ತೋಟತ್ತಾಡಿ ಗ್ರಾಮದ ಕೊಯಕ್ಕುರಿ ಎಂಬಲ್ಲಿ ಖಾಸಿಂ ಬ್ಯಾರಿ ಅವರ ಮನೆಗೆ ಸೋಮವಾರ ಮಧ್ಯಾಹ್ನ ಸಿಡಿಲು ಬಡಿದು ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಿಡಿಲಿನ ತೀವ್ರ ಹೊಡೆತಕ್ಕೆ ಮನೆಯ ವಿದ್ಯುತ್‌ ವಯರಿಂಗ್‌ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ವಿದ್ಯುತ್‌ ಸಂಪರ್ಕ ವ್ಯವಸ್ಥೆಗೆ ಹಾನಿಯಾಗಿದೆ. ಮನೆಯಲ್ಲಿದ್ದ ಕೆಲವು ವಿದ್ಯುತ್‌ ಉಪಕರಣಗಳಿಗೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಇದಲ್ಲದೆ ಮನೆಯ ಗೋಡೆ, ಮನೆ ಸಮೀಪ ಇರುವ ತಡೆಗೋಡೆಗೂ ಹಾನಿ ಉಂಟಾಗಿದೆ
ಸಿಡಿಲಿನ ಪರಿಣಾಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲೂ ಹಾನಿ ಸಂಭವಿಸಿದ್ದು, ತೋಟದಲ್ಲಿನ ಬೆಳೆಗೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸೋಮವಾರ ಮಧ್ಯಾಹ್ನ ತಾಲೂಕಿನ ಬಹುತೇಕ ಭಾಗಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.

LEAVE A REPLY

Please enter your comment!
Please enter your name here