Home ರಾಜಕೀಯ ಸಮಾಚಾರ ವೇಣೂರು: ಶಾಸಕ ಹರೀಶ್ ಪೂಂಜರಿಂದ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ, ಸಾರ್ವಜನಿಕ ರಿಕ್ಷಾ ತಂಗುದಾಣದ ಉದ್ಘಾಟನೆ

ವೇಣೂರು: ಶಾಸಕ ಹರೀಶ್ ಪೂಂಜರಿಂದ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ, ಸಾರ್ವಜನಿಕ ರಿಕ್ಷಾ ತಂಗುದಾಣದ ಉದ್ಘಾಟನೆ

0


ವೇಣೂರು: ವೇಣೂರು ಗ್ರಾಮ ಪಂಚಾಯತ್‌ನ ವಿಶೇಷ ಅನುದಾನಗಳಡಿಯ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇಂದು ನೆರವೇರಿಸಿದರು.

ವೇಣೂರು ಸ್ವಸ್ತಿಕ ನಗರದಲ್ಲಿ ರೂ. ೨.೩೦ ಲಕ್ಷ ಮತ್ತು ಬಜಿರೆ ಗ್ರಾಮದ ಮುದ್ದಾಡಿ ಬಳಿ ರೂ. ೧.೭೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರಿಟ್ ರಸ್ತೆಗೆ ಶಿಲಾನ್ಯಾಸ ಮತ್ತು ಬಜಿರೆಯ ಮುದ್ದಾಡಿಯಲ್ಲಿ ರೂ. ೧.೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ರಿಕ್ಷಾ ತಂಗುದಾಣದ ಉದ್ಘಾಟನೆಯನ್ನು ಶಾಸಕರು ನೆರವೇರಿಸಿದರು.
ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಸುರೇಶ್ ಆರಿಗ ಪೆರ್ಮಾಣುಗುತ್ತು, ಉದ್ಯಮಿ ಕೆ. ಭಾಸ್ಕರ ಪೈ, ತಾ.ಪಂ. ಮಾಜಿ ಸದಸ್ಯ ಕೆ. ವಿಜಯ ಗೌಡ, ನ್ಯಾಯವಾದಿ ಸಹನಾ ಕುಂದರ್ ಸೂಡಾ ಗುಂಡೂರಿ, ಪಂಚಾಯತು ಸದಸ್ಯರಾದ ಸುನಿಲ್ ಕುಮಾರ್, ಸುಜಾತ, ಲೀಲಾವತಿ, ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷರಾದ ವಸಂತ ಮಡಿವಾಳ ಅಂಡಿಂಜೆ, ಪ್ರಮುಖರಾದ ಶಶಿಕುಮಾರ್ ಇಂದ್ರ, ಶ್ರೀಮತಿ ರೂಪಾ ಚಂದನ ಸೇರಿದಂತೆ ಊರಿನ ಹಲವು ಮಂದಿ ಗಣ್ಯರು, ಬೂತ್ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯರಾಗಿರುವ ಅರುಣ್ ಕ್ರಾಸ್ತ ಅವರು ಸ್ವಾಗತಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version