Home ಅಪಘಾತ ಧರ್ಮಸ್ಥಳ: ಕಾರು ಪಲ್ಟಿ ಮೂವರಿಗೆ‌ ಗಾಯ

ಧರ್ಮಸ್ಥಳ: ಕಾರು ಪಲ್ಟಿ ಮೂವರಿಗೆ‌ ಗಾಯ

3
0

ಬೆಳ್ತಂಗಡಿ : ಧರ್ಮಸ್ಥಳದಿಂದ ಉಜಿರೆ ಕಡೆ ಪ್ರಯಾಣ ಮಾಡುತ್ತಿದ್ದ ನಾಲ್ಕು ಜನ ಕುಟುಂಬ ಸದಸ್ಯರಿದ್ದ ಕಾರು ನೇತ್ರಾವತಿಯ ಸರ್ವಿಸ್ ಸ್ಟೇಷನ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಕೋಲಾರ ಜಿಲ್ಲೆಯ ನಾಲ್ಕು ಕುಟುಂಬ ಸದಸ್ಯರಿಂದ ಟೊಯೋಟಾ ಈಟಿಯಾಸ್ ಕಾರು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ಬಳಿಕ ಉಜಿರೆ ಕಡೆ ಪ್ರಯಾಣ ಮಾಡುವಾಗ ಸೆ.14 ರಂದು ರಾತ್ರಿ 9:30 ಗಂಟೆಗೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಬಳಿಯ ಸರ್ವಿಸ್ ಸ್ಟೇಷನ್ ಪಕ್ಕದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಕಾರು ಚಾಲಕ ಶಶಿಕುಮಾರ್ ಸಮೇತ ಮೂರು ಜನರಿಗೆ ಕಾಲು ಮತ್ತು ಕೈಗೆ ಗಾಯವಾಗಿದೆ. ತಕ್ಷಣ ಮೂವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here