Home ಅಪರಾಧ ಲೋಕ ವೇಣೂರು ; ದಲಿತ ಕುಟುಂಬದ ಜಾಗಕ್ಕೆ ಅಕ್ರಮ ಪ್ರವೇಶ ಬೇಲಿ ಕಿತ್ತೆಸೆದು ದಾಂಧಲೆ: ಪ್ರಶ್ನಿಸಿದ ಮಹಿಳೆ...

ವೇಣೂರು ; ದಲಿತ ಕುಟುಂಬದ ಜಾಗಕ್ಕೆ ಅಕ್ರಮ ಪ್ರವೇಶ ಬೇಲಿ ಕಿತ್ತೆಸೆದು ದಾಂಧಲೆ: ಪ್ರಶ್ನಿಸಿದ ಮಹಿಳೆ ಮುಂದೆ ಬಟ್ಟೆ ಎತ್ತಿ ಮರ್ಮಾಂಗ ಪ್ರದರ್ಶನ ಆರೋಪಿ‌ ಬಂಧನ‌

0

ಬೆಳ್ತಂಗಡಿ : ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಿಸಿದ ವ್ಯಕ್ತಿಯೋರ್ವ ಕೃತ್ಯವನ್ನು ಆಕ್ಷೇಪಿಸಿದ ದಲಿತ ಕುಟುಂಬಗಳ ಮುಂದೆ ಉಟ್ಟ ಪಂಚೆ ಎತ್ತಿ ಮರ್ಮಾಂಗ ಪ್ರದರ್ಶಿಸಿ ವಿಕೃತಿ ಮೆರೆದ ವಿಲಕ್ಷಣ ಪ್ರಕರಣ ವೇಣೂರು ಸಮೀಪ ನಡೆದಿದ್ದು ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹೊಸಂಗಡಿ ಗ್ರಾಮದ ಪಡ್ಯಾಡಿ ನಿವಾಸಿ ಹನೀಫ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ‌ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಪಡ್ಯಾರಬೆಟ್ಟು ಎಂಬಲ್ಲಿ ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದಲೂ ವಾಸ್ತವ್ಯವಿದ್ದು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ದಲಿತ ಕುಟುಂಬ ಸಿಮೆಂಟ್ ಕಂಬದ ತಂತಿ ಬೇಲಿ ಹಾಕಿಕೊಂಡು
ಸ್ವಾಧೀನದಲ್ಲಿದ್ದ
ಜಾಗಕ್ಕೆ ಸೆ.7 ರಂದು ಸ್ಥಳೀಯ ನಿವಾಸಿ ಹನೀಫ್ ಎಂಬಾತ ಅಕ್ರಮ ಪ್ರವೇಶಿಸಿ ಜಾತಿನಿಂದನೆಗೈದು ಅವಾಚ್ಯ, ಅಶ್ಲೀಲ ಪದಗಳೊಂದಿಗೆ ನಿಂದಿಸಿದ್ದಲ್ಲದೆ ಸಿಮೆಂಟ್ ಕಂಬದ ತಂತಿ ಬೇಲಿಯನ್ನು ಕಿತ್ತೆಸೆದು
ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ
ಅಕ್ರಮವಾಗಿ ಪ್ರವೇಶಿಸಿ ಬೇಲಿ ಹಾನಿ ಮಾಡುತ್ತಿರುವುದನ್ನು ತಮ್ಮ ಜಾಗದಲ್ಲಿ ಕೆಲಸದಲ್ಲಿ ತೊಡಗಿದ್ದ ದಲಿತ ಕುಟುಂಬದ ಮಹಿಳೆಯೊಬ್ಬರು ಪ್ರಶ್ನಿಸಿದ್ದು ಘಟನಾವಳಿಯನ್ನು ತಮ್ಮ ಮೊಬೈಲ್ ಗಳಲ್ಲಿ ವೀಡಿಯೋ ಚಿತ್ರೀಕರಿಸುತ್ತಿದ್ದ ವೇಳೆ ಹನೀಫ್ ಮಹಿಳೆಯರ ಎದುರು ಬಂದು ತಾನು ಉಟ್ಟಿದ್ದ ಬಟ್ಟೆಯನ್ನು ಎತ್ತಿ ತನ್ನ ಒಳಉಡುಪನ್ನು ಜಾರಿಸಿ ತನ್ನ ಖಾಸಗಿ ಅಂಗವನ್ನು ತೋರಿಸುತ್ತಾ ಸಾರ್ವಜನಿಕವಾಗಿ ವಿಕೃತಿಯನ್ನು ಮೆರೆದು
ಜಾಗವನ್ನು ಬಿಟ್ಟು ಹೋಗದಿದ್ದರೆ
ನಿಮ್ಮನ್ನು ಮಾನಭಂಗ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಮಹಿಳೆಯರನ್ನು ಬೆನ್ನಟ್ಟಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈತನ ವಿಕೃತಿಯಿಂದ ಭಯಗೊಂಡ ದಲಿತ ಕುಟುಂಬ ಸ್ಥಳೀಯ ದಲಿತ ಮುಖಂಡರೊಂದಿಗೆ ವೇಣೂರು ಪೋಲಿಸ್ ಠಾಣೆಗೆ ತೆರಳಿ ವಿಡಿಯೋ ಚಿತ್ರೀಕರಣ ದೃಶ್ಯಾವಳಿಯ ಸಾಕ್ಷಾಧಾರಗಳ ಸಹಿತ ದೂರು ನೀಡಿದ್ದರು. ಅದರಂತೆ ವೇಣೂರು ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಹಾಗೂ ಬಿಎನ್ ಎಸ್ 329(3), 352,351(2),75(1), 324(4) ರಂತೆ ಪ್ರಕರಣ ದಾಖಲಿಸಲಾಗಿದೆ
ವೇಣೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version