Home ರಾಜಕೀಯ ಸಮಾಚಾರ SIR ಕಾರ್ಯಕ್ಕೆ ಸಮರ್ಪಕ ಸ್ವರೂಪ: ಹೋರಾಟಕ್ಕೆ ಸಿಕ್ಕ ಜಯ;ಜನಸಾಮಾನ್ಯರಿಗೆ ಸರಳೀಕೃತ ವ್ಯವಸ್ಥೆ ಜಾರಿ: ಬ್ಲಾಕ್ ಕಾಂಗ್ರೆಸ್...

SIR ಕಾರ್ಯಕ್ಕೆ ಸಮರ್ಪಕ ಸ್ವರೂಪ: ಹೋರಾಟಕ್ಕೆ ಸಿಕ್ಕ ಜಯ;ಜನಸಾಮಾನ್ಯರಿಗೆ ಸರಳೀಕೃತ ವ್ಯವಸ್ಥೆ ಜಾರಿ: ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ

2
0

ಬೆಳ್ತಂಗಡಿ: ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SIR) ಕಾರ್ಯವು ಜನಸಾಮಾನ್ಯರಿಗೆ ಸರಳವಾಗಿ ಹಾಗೂ ಅನುಕೂಲಕರವಾಗಿ ಜಾರಿಯಾಗಬೇಕೆಂದು ಕಾಂಗ್ರೆಸ್ ಪಕ್ಷ ನಡೆಸಿದ ನಿರಂತರ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ತಿಳಿಸಿದೆ.

SIR ಪ್ರಕ್ರಿಯೆಯಲ್ಲಿ ಸ್ವತಃ ಹಾಜರಾಗಿ ವಿವರಗಳನ್ನು ಸಲ್ಲಿಸಲು ಸಾಧ್ಯವಾಗದ ಹಿರಿಯ ನಾಗರಿಕರು, ಅಂಗವಿಕಲರು, ಆಸ್ಪತ್ರೆಯಲ್ಲಿ ದಾಖಲಾಗಿರುವವರು ಹಾಗೂ ವಿದೇಶದಲ್ಲಿರುವ ಭಾರತೀಯ ನಾಗರಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಇಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ಪರವಾಗಿ ಅವರ ಕುಟುಂಬ ಸದಸ್ಯರು ಅಥವಾ ರಕ್ತಸಂಬಂಧಿಗಳು ಅಗತ್ಯ ದಾಖಲೆಗಳನ್ನು ಪಡೆದು, ದೃಢೀಕರಿಸಿ ವಿವರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಸಲ್ಲಿಸಲಾದ ಮಾಹಿತಿಯನ್ನು ಸಂಬಂಧಪಟ್ಟ BLOಗಳು ಪರಿಶೀಲಿಸಿ ದೃಢೀಕರಿಸುವ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಇದರಿಂದ SIR ಕಾರ್ಯದಲ್ಲಿ ಸಾರ್ವಜನಿಕರಿಗೆ ಎದುರಾಗಬಹುದಾದ ಅನಗತ್ಯ ತೊಂದರೆಗಳು ಕಡಿಮೆಯಾಗಲಿದ್ದು, ಪ್ರಕ್ರಿಯೆ ಮತ್ತಷ್ಟು ಜನಸ್ನೇಹಿಯಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಜನಸಾಮಾನ್ಯರ ಸಮಸ್ಯೆಗಳನ್ನು ಗುರುತಿಸಿ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ SIR ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಕಾಂಗ್ರೆಸ್ ಪಕ್ಷ ನಿರಂತರವಾಗಿ ಧ್ವನಿ ಎತ್ತಿತ್ತು. ಇದೀಗ ವಿಶೇಷ ವರ್ಗದ ನಾಗರಿಕರಿಗೆ ಅನುಕೂಲ ಕಲ್ಪಿಸುವ ಕ್ರಮ ಜಾರಿಯಾಗಿರುವುದು ಕಾಂಗ್ರೆಸ್ ಹೋರಾಟಕ್ಕೆ ಸಿಕ್ಕ ಜಯ ಎಂದು ಬ್ಲಾಕ್ ಕಾಂಗ್ರೆಸ್ ಹೇಳಿದೆ.

ಜನರಿಗೆ ತೊಂದರೆಯಾಗದಂತೆ ಆಡಳಿತಾತ್ಮಕ ಪ್ರಕ್ರಿಯೆಗಳು ಸರಳವಾಗಬೇಕು ಎಂಬ ಕಾಂಗ್ರೆಸ್‌ನ ನಿಲುವಿಗೆ ಈ ಕ್ರಮ ಮತ್ತಷ್ಟು ಬಲ ನೀಡಿದೆ ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಮತ್ತು ಗ್ರಾಮೀಣ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here