Home ಅಪಘಾತ ಬೆಳ್ತಂಗಡಿ;  ಪುದುವೆಟ್ಟಿನಲ್ಲಿ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

ಬೆಳ್ತಂಗಡಿ;  ಪುದುವೆಟ್ಟಿನಲ್ಲಿ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

183
0

ಬೆಳ್ತಂಗಡಿ : ಪುದುವೆಟ್ಟು ಗ್ರಾಮದ ಮಿಯಾರು ನಿವಾಸಿ ಯುವತಿಯೊಬ್ಬಳು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ 9 ರಂದು ಸಂಜೆಯ ವೇಳೆ ನಡೆದಿದೆ.

ಮೃತ ಯುವತಿ‌‌ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮಿಯಾರು ಕಲ್ಲಂಡ ಮನೆ ನಿವಾಸಿ ಅಣ್ಣಿ ಗೌಡ ಮತ್ತು ಮಾಲತಿ ದಂಪತಿಗಳ ಮಗಳು ಲಿಶ್ಮಿತ ಗೌಡ(20) ಎಂಬಾಕೆಯಾಗಿದ್ದಾಳೆ. ಈಕೆ ನಡ ಸರಕಾರಿ ಕಾಲೇಜ್ ನಲ್ಲಿ ಕ್ಲರ್ಕ್ ಆಗಿ ಕೆಲಸ‌ಮಾಡುತ್ತಿದ್ದಳು. ಅನಾರೋಗ್ಯ ಕಾರಣದಿಂದ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ಬಾವಿಯಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು.
ಘಟನೆಯ ಬಗ್ಗೆ ಮಾಹಿತಿ ತಿಳಿದು ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here