Home ಅಪರಾಧ ಲೋಕ ಬೆಳ್ತಂಗಡಿ:ಕೊಯ್ಯೂರು ನಿವಾಸಿ ಪ್ರವೀಣ್ ನಾಪತ್ತೆ

ಬೆಳ್ತಂಗಡಿ:ಕೊಯ್ಯೂರು ನಿವಾಸಿ ಪ್ರವೀಣ್ ನಾಪತ್ತೆ

3
0

ಬೆಳ್ತಂಗಡಿ: ಮನೆಯಿಂದ ಬೈಕ್ ನಲ್ಲಿ ಪೇಟೆಗೆಂದು ಹೊರಟ ಪ್ರವೀಣ್ (40) ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಆ. 22 ರಂದು  ಕೊಯ್ಯೂರಿನಲ್ಲಿ ನಡೆದಿದ್ದು ಈ‌ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ‌ಪ್ರಕರಣ ದಾಖಲಿಸಲಾಗಿದೆ.

ಸಂಜೀವ ಗೌಡ ಎಂಬವರು ಈಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ‌ ಕೊಯ್ಯೂರು ನಾನಿಲ್ದಡಿ ನಿವಾಸಿ ಪ್ರವೀಣ್ (40ವ) ಎಂಬುವವರು ಚಾಲಕ ಕೆಲಸ ಮಾಡಿಕೊಂಡಿದ್ದು ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದ.ಈತ ಎಂದಿನಂತೆ ಆ.22ರಂದು ಬೆಳಿಗ್ಗೆ ಮನೆಯಿಂದ ಮನೆಯಲ್ಲಿ ಸಿಸಿ ಕ್ಯಾಮಾರ, ಆದರ ಡಿವಿಆರ್ ನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಆತನ ಬೈಕ್ ನಲ್ಲಿ ಹೋದವನು ವಾಪಸ್ಸು ಮನೆಗೆ ಬರಲೆ‌ಇಲ್ಲ. , ಈತನ ಬಗ್ಗೆ, ಸಂಬಂಧಿಕರಲ್ಲಿ ನೆರೆಮನೆಯವರಲ್ಲಿ ವಿಚಾರಿಸಿ ಹುಡುಕಾಡಿದರೂ ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಯುವಕನ ಬಗ್ಗೆ ಎಲ್ಲಿಯಾದರೂ ತಿಳಿದುಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08256-232093 ಅಥವಾ 9480805370 ಸಂಪರ್ಕಿಸುವಂತೆ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here