ಪುತ್ತೂರು; ಆ 31 ರಂದು ನಡೆಯಲಿರುವ ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಷರತ್ತುಬದ್ದ ಅನುಮತಿ ನೀಡಲಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂಧೋಬಸ್ತ್ ಮಾಡಲಾಗಿದ್ದು ವಿಶೇಷ ಪೊಲೀಸ್ ಪಡೆ ನಿಯೋಜಿಸಲಾಗಿದ್ದು ಪೊಲೀಸರು ನಗರದಲ್ಲಿ ಪಥಸಂಚಲನ ನಡೆಸಿದರು.
ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ಒಬ್ಬರು ಎಡಿಶನಲ್ ಎಸ್ಪಿ ಅವರ ನೇತೃತ್ವದಲ್ಲಿ
ಡಿ.ವೈ.ಎಸ್.ಪಿ – 01
ಪಿ.ಐ – 03, ಪಿ.ಎಸ್.ಐ – 10, ಎ.ಎಸ್.ಐ – 14 ಸಿಬ್ಬಂದಿಗಳು – 139
ಕೆ.ಎಸ್.ಆರ್.ಪಿ ತುಕಡಿ -05, ಎಸ್.ಎ.ಎಫ್ ತಂಡ 2, ಡಿ.ಎ.ಆರ್ ತುಕಡಿ -07 ನ್ನು ಸ್ಥಳದಲ್ಲಿ ನಿಯೋಜಿಸಲಾಗಿರುವುದಾಗಿ ಪೊಲೀಸ್ ಇಲಾಖೆಯ ಪ್ರಕಟನೆ ತಿಳಿಸಿದೆ.










