Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಶಿರ್ಲಾಲು ಗ್ರಾ.ಪಂ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯಲ್ಲಿ ಅವ್ಯವಸ್ತೆ ಫಲಾನುಭವಿಗಳಿಂದ ಪ್ರತಿಭಟನೆಯ ಎಚ್ಚರಿಕೆ

ಬೆಳ್ತಂಗಡಿ; ಶಿರ್ಲಾಲು ಗ್ರಾ.ಪಂ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯಲ್ಲಿ ಅವ್ಯವಸ್ತೆ ಫಲಾನುಭವಿಗಳಿಂದ ಪ್ರತಿಭಟನೆಯ ಎಚ್ಚರಿಕೆ

2
0

ಬೆಳ್ತಂಗಡಿ;  ಶಿರ್ಲಾಲು ಗ್ರಾಮ ಪಂಚಾಯತ್ ನ ಸುಳ್ಕೇರಿಮೊಗ್ರು ಸಹಕಾರಿ ವ್ಯವಸಾಯಿಕ ಬ್ಯಾಂಕ್ ನಿಯಮಿತ ಶಿರ್ಲಾಲು ಇಲ್ಲಿ ಕಳೆದ ಕೆಲವು ದಿನಗಳಿಂದ ಪಡಿತರ ಸಾಮಾಗ್ರಿಗಳನ್ನು ಪಡೆಯಲು ನೂರಾರು ಜನ ಹತ್ತು ಹದಿನೈದು ದಿನಗಳಿಂದ ಮೂರು ನಾಲ್ಕು ಕಿಲೋಮೀಟರ್ ದೂರದಿಂದ ಬಂದು ಸರ್ವರ್ ಸಮಸ್ಯೆ ಎಂದು ಕಾದು ಕುಳಿತು ಹಿಂತಿರುಗುತ್ತಿದ್ದಾರೆ

ಇಲ್ಲಿ ಆಹಾರ ವಿತರಕರು ಸರಕಾರದ ಸಮಯ ಪಾಲನೆಯ ನಿಯಮ ಪಾಲಿಸುವುದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸರಕಾರದ ಸಮಯ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ತನಕ ಪಡಿತರ ವಿತರಣೆಯ ಮಾಡ ಬೇಕು ಎಂದು ಎಲ್ಲಾ ಪಡಿತರ ವಿತರಣೆಯವರಿಗೆ ತಿಳಿಸಲಾಗಿದೆ ಆದರೆ ಶಿರ್ಲಾಲು ಪಡಿತರ ವಿತರಣೆಯ ಬಾಗಿಲು ತೆಗೆಯುವಾಗ ಸಮಯ ಬೆಳಿಗ್ಗೆ ಹತ್ತು ಗಂಟೆಯಾಗುತ್ತದೆ ಎಂದು ಜನರು ಆರೋಪಿಸುತ್ತಿದ್ದಾರೆ. ಈ ಸರ್ವರ್ ಸಮಸ್ಯೆಗೆ ಸರಿಯಾದ ಒರಿಹಾರ ಕಂಡುಕೊಳ್ಳಬೇಕು ಮತ್ತು ಪಡಿತರ ವಿತರಣೆಯನ್ನು ಸರಿ ಮಾಡದ್ದಿದ್ದಾರೆ ಮುಂದಿನ ದಿನಗಳಲ್ಲಿ ಪಡಿತರ ಫಲಾನುಭಿಗಳಿಂದ ಹೋರಾಟ ಮಾಡುವ ಪರಿಸ್ಥಿತಿ ಬರ ಬಹುದು ಎಂದು ಸ್ಥಳೀಯರು ಎಚ್ಚರಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here