ಬೆಳ್ತಂಗಡಿ: ಬಂದಾರು, ಮೊಗ್ರು, ಕಣಿಯೂರು ಹರೀಶ್ ಪೂಂಜ ಅಭಿನಂದನಾ ಸಮಿತಿಯಿಂದ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತರಾದ ಶಾಸಕ ಹರೀಶ್ ಪೂಂಜ ಅವರಿಗೆ ಅಭಿನಂದನಾ ಕಾರ್ಯಕ್ರಮ ಆ.23 ರಂದು ಪದ್ಮುಂಜ ಸಿಎ ಬ್ಯಾಂಕ್ ನ ರೈತ ಸಭಾಭವನದಲ್ಲಿ ನಡೆಯಿತು. ಕಣಿಯೂರು ರೈತ ಬಂಧು ಮಾರುತಿಪುರ ಸಂಸ್ಥೆಯ ಮಾಲಕರಾದ ಶಿವಶಂಕರ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮನೋಹರ ಗೌಡ ಅಂತರ, ಚಂದ್ರಹಾಸ ಗೌಡ ದೇವಸ್ಯ ಗುತ್ತು, ಸುದರ್ಶನ್ ಹೆಗ್ಡೆ ಕಣಿಯೂರು ಗುತ್ತು, ಪಿಲಿಗೂಡು ಚಾಮುಂಡೇಶ್ವರಿ ದೇವಸ್ಥಾನದ ಶಿಲ್ಪಿ ಪದ್ಮನಾಭ ಶಿಲ್ಪಿ, ಮಲೆಂಗಲ್ಲು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತಸರ ಚಿದಾನಂದ ರಾವ್ ಕೊಲ್ಲಾಜೆ, ಮರಾಠಿ ಮಹಮ್ಮಯಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಬಾಬು ನೈಕ್ ಮೈಪಾಜೆ, ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕೇಶವ ಸಾಲಿಯಾನ್, ಧರ್ಣಪ್ಪ ಗೌಡ, ಪ್ರಗತಿಪರ ಕೃಷಿಕ ಜನಾರ್ದನ ಪೂಜಾರಿ ಕಡ್ತಿಲ, ಪತ್ರಕರ್ತ ಅಚುಶ್ರೀ ಬಾಂಗೇರು, ಮಾವಿನಕಟ್ಟೆ ಚರ್ಚ್ ನ ಧರ್ಮಗುರುಗಳಾದ ಪಾ.ಕಾಶ್ಮೀರ್ ಡಿಸೋಜಾ, ಸಿಎ ಬ್ಯಾಂಕ್ ನಿವೃತ್ತ ಮ್ಯಾನೇಜರ್ ತಿಮ್ಮಯ್ಯ ಗೌಡ, ಧರ್ಣಪ್ಪ ಗೌಡ ಕೋಡಿಯೇಲು
ಬಂದಾರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ದಿನೇಶ್ ಖಂಡಿಗ, ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ, ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ ಮತ್ತಿತರರು ಉಪಸ್ಥಿತರಿದ್ದರು.ಕೃಷಿ ಪ್ರಶಸ್ತಿ ಪುರಸ್ಕೃತ ದೇವಿಪ್ರಸಾದ್ ಕಡಮ್ಮಾಜೆ ಅಭಿನಂದನಾ ಭಾಷಣ ಮಾಡಿದರು.ಕಣಿಯೂರು, ಮೊಗು, ಬಂದಾರು ವ್ಯಾಪ್ತಿಯ 40ಕ್ಕೂ ಮಿಕ್ಕಿ ಸಂಘ ಸಂಸ್ಥೆಗಳಿಂದ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜ ರನ್ನು ಸನ್ಮಾನಿಸಲಾಯಿತು.
ಮಹಾಬಲ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಮಾಧವ ಗೌಡ ಕಾರ್ಯಕ್ರಮ ನಿರೂಪಿಸಿದರು.












