Home ಅಪಘಾತ ಧರ್ಮಸ್ಥಳ ಹಿಟ್ ಆಂಡ್ ರನ್ ಪ್ರಕರಣ‌ ಆರೋಪಿಯನ್ನು ಬಂಧಿಸಿದ ಪೊಲೀಸರು

ಧರ್ಮಸ್ಥಳ ಹಿಟ್ ಆಂಡ್ ರನ್ ಪ್ರಕರಣ‌ ಆರೋಪಿಯನ್ನು ಬಂಧಿಸಿದ ಪೊಲೀಸರು

0

ಧರ್ಮಸ್ಥಳ: ಕನ್ಯಾಡಿ ಪುಡೈತ್ ಚಡವು ಬಳಿ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದು ಆರೋಪಿ ಶರತ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಗೆ ಸೆಪ್ಟೆಂಬ‌ರ್ 3 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಜುಲೈ 30 ರಂದು ನಿಡಿಗಲ್ ನಿವಾಸಿ ಬಾಲಕೃಷ್ಣ ಅವರು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದ, ಗಂಭೀರವಾಗಿ ಗಾಯಗೊಂಡ ಬಾಲಕೃಷ್ಣ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ‌ ಶರತ್ ಬಾಲಕೃಷ್ಣನ ಮೇಲೆ ಹಗೆ ಸಾಧಿಸುತ್ತಿದ್ದು ಈ‌ಹಿಂದೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿದ್ದು ಈತ ಉದ್ದೇಶ ಪೂರ್ವಕವಾಗಿ ವಾಹನ ಡಿಕ್ಕಿಹೊಡೆದು ಕೊಲೆಗೆ ಯತ್ನಿಸಿರುವುದಾಗಿಯೂ ಗಾಯಾಳು ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸರು ಕಾರು ಚಾಲಕ ಶರತ್ ನನ್ನು ಸುಬ್ರಹ್ಮಣ್ಯ ದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ಆ.22 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದ್ದು. ಆರೋಪಿಗೆ ಸೆ.3 ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version