ಬೆಳ್ತಂಗಡಿ : ಪಟ್ಟ ಜಾಗದ ಒತ್ತುವರಿ ಕುಮ್ಕಿ ಜಾಮೀನು ಎಂದು ಹೇಳಿ ಅದನ್ನು ದರ್ಖಾಸು ಮಾಡಿಕೊಡುವುದಾಗಿ ಸುಳ್ಳು ಹೇಳಿ ಸರಕಾರಿ ಜಾಮೀನನ್ನು ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಂಗಳೂರು ನಗರದ ಕೊಟ್ಟಾರ ಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂಟಿಲ (61) ಎಂಬವರು ನೀಡಿದ ದೂರಿನ ಮೇರೆಗೆ ಆ.19 ರಂದು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್(ರಿ) ಅಧ್ಯಕ್ಷ ಸೋಮನಾಥ್ ನಾಯಕ್ ಮತ್ತು ರಂಜನ್ ರಾವ್ ಎರ್ಡೂರು ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ; ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ದಿನಾಂಕ 04-10-2025 ರಂದು ರಂಜನ್ ರಾವ್ ಎರ್ಡೂರು ಎಂಬವರ ಮಾಲಕತ್ವದ ಸರ್ವೆ ನಂ 85/3ಎ ಜಮೀನಿಗೆ ಸಂಬಧಪಟ್ಟಂತೆ 0.28.50 ಎಕ್ರೆ ಜಮೀನನ್ನು ಕುರಿತು ಸೋಮನಾಥ್ ನಾಯಕ್ ಎಂಬವರ ಮುಂದಾಳತ್ವದಲ್ಲಿ ರಂಜನ್ ರಾವ್ ಎರ್ಡೂರು ರವರಿಗೂ ಹಾಗೂ ಮಂಗಳೂರಿನ ಶಶಿಧರವರಿಗೂ ಕರಾರು ಆಗಿದ್ದು ಮೇಲೆ ತಿಳಿಸಿದ ಜಮೀನಿನೊಟ್ಟಿಗೆ 0.70.25 ಎಕ್ರರೆ ಜಮೀನು ಇದರೊಟ್ಟಿಗೆ ಲಗತ್ತು ಇದ್ದು ಸದ್ಯಕ್ಕೆ ಕುಮ್ಕಿ ಎಂದು ಕಾಣಿಸುತ್ತೇವೆ. ಮುಂದಕ್ಕೆ ಇದನ್ನು ದರ್ಖಾಸ್ತು ಮಾಡಿಸಿಕೊಂಡು ಒಟ್ಟು 0.28.50 ಹಾಗೂ 0.70.25 ಒಟ್ಟು 0.98.75 ಎಕ್ರೆ ಜಮೀನನ್ನು ರಿಜಿಸ್ಟರ್ ದಾಖಲು ಮುಖೇನ ಕ್ರಯವರಿಸಿ ನಿಮ್ಮ ಸ್ವಾಧಿನಕ್ಕೆ ಕೊಡುತ್ತೇನೆಂದು ಹೇಳಿ ಅಪಾಧಿತರು ಒಟ್ಟು 90,00,000 /-ರೂಪಾಯಿಗೆ ಕರಾರು ಮಾಡಿಕೊಂಡಿದ್ದು ಅದರಂತೆ ಸೋಮನಾಥ ನಾಯಕ್, ರಂಜನ್ ರಾವ್ ಯೆರ್ಡೂರು ಹಾಗೂ ಅವರು ಸೂಚಿಸಿದ ಇತರ ಖಾತೆಗಳಿಗೆ ಒಟ್ಟು ರೂ ಒಂದು ಕೋಟಿ ಸಂದಾಯ ಮಾಡಿರುವುದಾಗಿಯೂ
ದಿನಾಂಕ 14-05-2026 ರಂದು 28 ಸೆಂಟ್ಸ್ ಕೃಷಿ ಭೂಮಿಯನ್ನು ದಸ್ತಾವೇಜು ನಂಬ್ರ 693/2026-27 ರಂತೆ ಆಪಾದಿತರು ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ.
0.70.25 ಜಾಗವನ್ನು ದರ್ಖಾಸ್ತು ಮಾಡುವುದು ಕಷ್ಟಸಾಧ್ಯವೆಂದು ತಿಳಿದಿದ್ದರೂ ಕೂಡ ತನ್ನ ಅತಿಕ್ರಮಿಸಿರುವ ಸರಕಾರಿ ಜಮೀನನ್ನು ಸೇರಿಸಿ ಒಟ್ಟು 0.98.75 ಎಕ್ರೆ ಜಾಗವನ್ನು ಕೊಡುವುದಾಗಿ ಶಶಿಧರ ಅವರಿಗೆ 90 ಲಕ್ಷಕ್ಕೆ ಕರಾರು ಮಾಡಿಕೊಂಡಿದ್ದರೂ ಕೂಡ 1,00,61,250/- ರೂ ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣದ ಬಗ್ಗೆ ಸೋಮನಾಥ ನಾಯಕ್, ರಂಜನ್ ರಾವ್ ಸ್ಪಷ್ಟನೆ
ನಾಗರಿಕಸೇವಾ ಟ್ರಸ್ಟ್ ನ ಅಧ್ಯಕ್ಷ ಸೋಮನಾಥ ನಾಯಕ್‌ಹಾಗೂ ರಂಜನ್ ರಾವ್ ವಿರುದ್ದ ಶಶಿಧರ್ ಅಚ್ಯುತ ತೋಟಂತಿಲ ಇವರು, ಭೂಮಿ ವರ್ಗಾವಣೆ ಮಾಡುವುದಾಗಿ ಕರಾರು ಮಾಡಿ, ಹೆಚ್ಚು ಹಣ ಪಡೆದು ವಂಚನೆ ಮಾಡಿರುವುದಾಗಿ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ನೀಡಿದ ದೂರಿನಬಗ್ಗೆ ಸೋಮನಾಥ ನಾಯಕ್ ಹಾಗೂ ರಂಜನ್ ರಾವ್ ಸ್ಪಷ್ಟನೆ ನೀಡಿದ್ದು ತಾವು ಯಾವುದೇ ವಿಚಾರಗಳನ್ನು ಮುಚ್ಚಿಟ್ಟು ವಂಚನೆ ಮಾಡಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಭೂಮಿಯ ಮಾಲಕ ರಂಜನ್ ರಾವ್ ಯರ್ಡರ್ ಕರಾರು ಪ್ರಕಾರ 28.50 ಸೆಂಟ್ಸ್ ಭೂಮಿಯನ್ನು ಕುಮ್ಮಿ ಹಕ್ಕು ಸಹಿತ ನೋಂದಣೆ ಮಾಡಿಕೊಟ್ಟಿದ್ದಾರೆ. ಹೆಚ್ಚುವರಿ ಖರೀದಿ ಮಾಡಲು ಉದ್ದೇಶಿಸಿದ 9.25 ಸೆಂಟ್ಸ್ ನೋಂದಣಿಗೆ ಬಾಕಿ ಇರುತ್ತದೆ, ಸರ್ವೆಯರ್‌ಗಳ ದೀರ್ಘ ಮುಷ್ಕರದಿಂದಾಗಿ ಇದರ ನಕ್ಷೆ ಸಿದ್ಧವಾಗದೆ ನೋಂದಣೆ ಸಾಧ್ಯವಾಗಿಲ್ಲ. ನಾವು ಅವರಿಗೆ ವಂಚನೆ ಮಾಡಿಲ್ಲ, ಯಾವುದೇ ವಿಷಯ ಮುಚ್ಚಿಟ್ಟಿಲ್ಲ ಎಂದು ಮಾಹಿತಿ ನೀಡಿರುವ ಅವರು
ಭೂಕಬಳಿಕೆ ನಿಷೇಧ ಕೋರ್ಟ್‌ನಲ್ಲಿ ದಾವೆ ಇರುವುದು ನಮಗೆ ತಿಳಿದು ಬಂದದ್ದು ನೋಂದಣೆಯಾದ ಹಲವು ದಿನಗಳ ಬಳಿಕ. ಕುಮ್ಮಿ ಭೂಮಿ ಈ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ತಹಿಶೀಲ್ದಾರರಿಗೆ ಕುಮ್ಮಿ ಬಗ್ಗೆ ಶಶಿಧರ್‌ರು ಹೇಳಿಕೆ ನೀಡಿದ್ದಾರೆ.
ಜಾಗ ನೀಡಿ ವ್ಯವಹಾರ ಮಾಡದ
ನಮ್ಮಲ್ಲಿ ಮಾತಾಡದೆ ಏಕಾಏಕಿ ಪೋಲೀಸ್ ದೂರು ನೀಡಿದ್ದಾರೆ ಅವರಿಗೆ ನಾವು ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇವೆ. ನೋಂದಣೆಯ ಮೊದಲೇ ಭೂಮಿ ಅವರ ಸ್ವಾಧೀನಕ್ಕೆ ಕೋಟ್ಟಿದ್ದೇವೆ. ಅವರು ಸಜ್ಜನರು. ಯಾರದ್ದೋ ಕುಮ್ಮಕ್ಕಿನಿಂದ ದೂರು ನೀಡಿಸಿರಬಹುದೆಂದು ನಮ್ಮ ಭಾವನೆ. ಅವರಿಗೆ ಭೂಮಿ ಬೇಡವೆಂದಾದಲ್ಲಿ ತಿಳಿಸಲಿ. ಅವರಿಗೆ ನಷ್ಟವಾಗದಂತೆ ಹಣ ಹಿಂತಿರುಗಿಸಲು ನಾವು ಸಿದ್ಧರಿದ್ದೇವೆ. ಎಂದು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
