Home ಸ್ಥಳೀಯ ಸಮಾಚಾರ ಬೆಳ್ತಂಗಡಿ; ಉಮೇಶ್ ಮದ್ದಡ್ಕ‌ ಅವರಿಗೆ ಛಾಯಾ ರತ್ನ ಪ್ರಶಸ್ತಿ

ಬೆಳ್ತಂಗಡಿ; ಉಮೇಶ್ ಮದ್ದಡ್ಕ‌ ಅವರಿಗೆ ಛಾಯಾ ರತ್ನ ಪ್ರಶಸ್ತಿ

3
0

ಬೆಳ್ತಂಗಡಿ;  ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬ್ರಹ್ಮಾವರ ವಲಯ ಹಾಗೂ ರೋಟರಿ ಕ್ಲಬ್ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ನೀಡಲಾಗುವ ಪ್ರತಿಷ್ಟಿತ ಛಾಯಾರತ್ನ ಪ್ರಶಸ್ತಿಗೆ ಮದ್ದಡ್ಕ ಮನು ಸ್ಟುಡಿಯೋ ಮಾಲಕರಾದ ಉಮೇಶ್ ಮದ್ದಡ್ಕ ಅವರನ್ನು ಬ್ರಹ್ಮಾವರ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ. ಪ್ರಮೋದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆ.18ರಂದು ರೋಟರಿ ಕ್ಲಬ್ ಬ್ರಹ್ಮಾವರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.
ಈ ಸಂಧರ್ಭ ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ಬ್ರಹ್ಮಾವರ ವಲಯದ ಅಧ್ಯಕ್ಷರಾದ ಆಲ್ವಿನ್ ಅಂದ್ರಾದೆ, ಕಾರ್ಯದರ್ಶಿ ಪ್ರತೀಷ್ ಕುಮಾರ್, ಕೋಶಾಧಿಕಾರಿ ಹರೀಶ್ ತೆಕ್ಕಟೆ, ಛಾಯಾ ಕಾರ್ಯದರ್ಶಿ ಅಮಿತ್ ತೆಕ್ಕಟೆ, ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ದ.ಕ – ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ದೇವರಾಜ್ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ ಹೆರಿಕ್ ಡಿಸೋಜ, ಬ್ರಹ್ಮಾವರ ರೋಟರಿ ಕ್ಲಬ್ ನ ಕಾರ್ಯದರ್ಶಿ ರೊ. ಅರುಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಕೌಡಂಗೆ, ವಲಯದ ಕಾರ್ಯದರ್ಶಿ ದಾಮೋದರ ಗುರುವಾಯನಕೆರೆ, ಜತೆ ಕಾರ್ಯದರ್ಶಿ ಗಣೇಶ್ ಹೆಗ್ಡೆ ನಾರಾವಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here