ಗುರುವಾಯನಕೆರೆ : ಆ.17 ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ಗುರುವಾಯನಕೆರೆ ಇದರ ವತಿಯಿಂದ ಜನಪ್ರಿಯ ಶಾಸಕರಾದ ಹರೀಶ್ ಪೂಂಜ ಅವರ ಹುಟ್ಟು ಹಬ್ಬದ ಪ್ರಯುಕ್ತ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು.ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ ಈ ಬಾರಿ ಕುವೆಟ್ಟು ಗ್ರಾಮದ ಬರಾಯ ನಿವಾಸಿ ಬಡ ಕುಟುಂಬದ ಕಮಲ ಅವರಿಗೆ ಶಾಸಕರ ಸಹಕಾರದೊಂದಿಗೆ ,ಸಾಯಿ ರಾಮ್ ಫ್ರೆಂಡ್ಸ್ ಹಾಗು ದಾನಿಗಳ ನೆರವಿನೊಂದಿಗೆ ಮನೆ ನಿರ್ಮಾಣ ಮಾಡಿಕೊಡುವ ಸಂಕಲ್ಪದೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಶಕ್ತಿನಗರ, ದೇವಿಪ್ರಸಾದ್ ಆಚಾರ್ಯ ಶಕ್ತಿನಗರ,ವಿತೇಶ್ ಪಾಡ್ಯರ್, ಪ್ರದೀಪ್ ಶೆಟ್ಟಿ ನವಶಕ್ತಿ, ನಿಮಿತ್ ಪೂಜಾರಿ ಪಾಡ್ಯರ್,ಪವನ್ ಬಂಗೇರ ಬರಾಯ, ರಮೇಶ್ ಬರಾಯ ಹಾಗು ಸಾಯಿರಾಮ್ ಫ್ರೆಂಡ್ಸ್ ಶಕ್ತಿನಗರ ತಂಡದ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.










