Home ಶಾಲಾ ಕಾಲೇಜು ಬಂದಾರು ; 80ನೇ ಸ್ವಾತಂತ್ರ್ಯೋತ್ಸವ ಮತ್ತು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ; ಗ್ರಾಮೀಣ ಸರಕಾರಿ ಶಾಲೆಗಳನ್ನು...

ಬಂದಾರು ; 80ನೇ ಸ್ವಾತಂತ್ರ್ಯೋತ್ಸವ ಮತ್ತು ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮ; ಗ್ರಾಮೀಣ ಸರಕಾರಿ ಶಾಲೆಗಳನ್ನು ಉಳಿಸುವ ಸಂಕಲ್ಪಮಾಡೋಣ; ಮೋಹನ್ ಕುಮಾರ್

0

ಬಂದಾರು : ಮುಂದಿನ ದಿನಗಳಲ್ಲಿ ಒಂದು ವರ್ಷದ ಮಟ್ಟಿಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಯುವ ಜನತೆ ಗುರಿಯೊಂದಿಗೆ ಎನ್ ಎಸ್ ಎಸ್ ವಿದ್ಯಾರ್ಥಿಗಳು ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೇರಿಕೊಂಡು ಶಕ್ತಿ ನೀಡಿ ಬದುಕು ಕಟ್ಟೋಣ ತಂಡದ ಸಮಾಜಮುಖಿ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು
ಮತ್ತು ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದು ಸಂಕಲ್ಪ ಮಾಡಬೇಕಾಗಿದೆ ಎಂದು “ಬದುಕು ಕಟ್ಟೋಣ ಬನ್ನಿ” ತಂಡದ ಸಂಚಾಲಕ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ
ಮೋಹನ್ ಕುಮಾರ್
ಹೇಳಿದರು.
ಅವರು ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ “ಬದುಕು ಕಟ್ಟೋಣ ಬನ್ನಿ” ಸೇವಾ ಟ್ರಸ್ಟ್‌ (ರಿ.) ಉಜಿರೆ,
ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮೇಲಂತಬೆಟ್ಟು, ರೋಟರಿ ಕ್ಲಬ್‌ ಬೆಳ್ತಂಗಡಿ ,
ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರ
ನೇತೃತ್ವದಲ್ಲಿ ಜರಗಿದ
80ನೇ ಸ್ವಾತಂತ್ರ್ಯೋತ್ಸವದಲ್ಲಿ ಶಾಲಾ ದತ್ತು ಸ್ವೀಕಾರ ಕಾರ್ಯಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎನ್ ಎಸ್ ಎಸ್ ವಾರ್ಷಿಕ ಶಿಬಿರವನ್ನು ಇದೇ ಶಾಲೆಯಲ್ಲಿ ನಡೆಸುವುದೆಂದು ನಿರ್ಧರಿಸಿದ್ದೇವೆ, ಎನ್ ಎಸ್ ಎಸ್ ವಿದ್ಯಾರ್ಥಿಗಳು ಗ್ರಾಮದ ಮನೆ ಮನೆಗಳಿಗೆ ತೆರಳಿ ಊರವರ ಕುಂದು ಕೊರತೆ ಸಮಸ್ಯೆಗಳ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ಕಳಿಸುವ ಕೆಲಸವನ್ನು ಮಾಡಲಿದ್ದಾರೆ, ಆದರೆ ಊರವರ ದೊಡ್ಡ ಮಟ್ಟದ ಸಹಕಾರ ಬೇಕಾಗಿದೆ ಎಂದು ತಿಳಿಸಿದರು.
2019ರಲ್ಲಿ ಆಗಸ್ಟ್ 15ರಂದು ತಾಲೂಕಿನ ನೆರೆ ಪೀಡಿತ ಕೊಳಂಬೆಯಲ್ಲಿ
ಎಲ್ಲವನ್ನೂ ಕಳೆದುಕೊಂಡ ಕುಟುಂಬಗಳಲ್ಲಿ ಮಾನವೀಯ ಸ್ಪಂದನೆಯೊಂದಿಗೆ ಧೈರ್ಯ ತುಂಬಿ ಮತ್ತೆ ಹೊಸ ಬದುಕಿ ಕಟ್ಟಿಕೊಳ್ಳುವಲ್ಲಿ
ಜೊತೆಗೆ ನಿಲ್ಲುವ‌ ಮೂಲಕ
“ಬದುಕು ಕಟ್ಟೋಣ ಬನ್ನಿ” ಪ್ರಾರಂಭವಾಯಿತು ಎಂದು ಮೆಲುಕು ಹಾಕಿದ ಮೋಹನ್ ಕುಮಾರ್ ಅವರು
ಕಳೆದ ಏಳು ವರ್ಷಗಳಲ್ಲಿ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ,
ನಮ್ಮ‌ ಸಮಾಜ ಮುಖಿ ಕಾರ್ಯಗಳಿಗೆ ದೊಡ್ಡ ಸಹಕಾರ ಕೊಡುತ್ತಾ ಬಂದವರು ಲಯನ್ಸ್ ಕ್ಲಬ್ ಜೊತೆಗೆ ಪತ್ರಕರ್ತರ ಸಂಘ , ಇಂಥ ಸಮಾಜಮುಖಿ
ಕಾರ್ಯದಲ್ಲಿ ಬೆಳ್ತಂಗಡಿ ಸರಕಾರಿ ಪ್ರ.ದ. ಕಾಲೇಜಿನ ಎನ್ ಎಸ್ ಎಸ್ ಘಟಕಗಳ 200 ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ ಎಂದರು.
ಆದರೆ ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮಸ್ಥರ, ಊರವರ ದೊಡ್ಡ ಮಟ್ಟದ ಪಾತ್ರ, ಸಹಕಾರ ಇದ್ದಲ್ಲಿ ಮಾತ್ರ ಕಾರ್ಯವು ಯಶಸ್ವಿಯಾಗುತ್ತದೆ ಎಂದು ಮೋಹನ್ ಕುಮಾರ್ ಆಶಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ
ರಘುರಾಮ ಶೆಟ್ಟಿ ಧ್ವಜಾರೋಹಣಗೈದು
ಶುಭ ಹಾರೈಸಿದರು.

ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮೇಶ್ ಗೌಡ ಪೊಯ್ಯೊಲೆ,
ಹಿರಿಯ ವಿದ್ಯಾರ್ಥಿ
ಎನ್.ಎಸ್.ಎಸ್. ಪಿಒ. ಡಾ.ಕುಶಾಲಪ್ಪ , ಎನ್.ಎಸ್.ಎಸ್. ಪಿಒ.
ಡಾ.ಸುಮನ್ ಶೆಟ್ಟಿ,
ಪದ್ಮುಂಜ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷ ಅಶೋಕ್ ಪಾಂಜಾಳ,
ವಿದ್ಯಾ ಕುಮಾರ್ ಕಾಂಚೋಡು, ಪತ್ರಕರ್ತ ದಿನೇಶ್ ಕೋಟ್ಯಾನ್,
ಜಗದೀಶ್ ,
ತಿಮ್ಮಯ್ಯ ಶೆಟ್ಟಿ,
ಮುಖ್ಯ ಶಿಕ್ಷಕ ವಿಶ್ವನಾಥ ಸ್ವಾಗತಿಸಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version