Home ಸ್ಥಳೀಯ ಸಮಾಚಾರ ಬೆಳ್ತಂಗಡಿ: ನಿಯಮ ಉಲ್ಲಂಘಿಸಿ ಅರಣ್ಯದ ನಡುವಿನ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ದ ಹೋಂ ಸ್ಟೇ‌ ಮಾಲಕನಿಗೆ ದಂಡ‌

ಬೆಳ್ತಂಗಡಿ: ನಿಯಮ ಉಲ್ಲಂಘಿಸಿ ಅರಣ್ಯದ ನಡುವಿನ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ದ ಹೋಂ ಸ್ಟೇ‌ ಮಾಲಕನಿಗೆ ದಂಡ‌

7
0

ಬೆಳ್ತಂಗಡಿ : ತಾಲೂಕಿನ ಜಲಪಾತ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿದ್ದ ನಡುವೆಯೂ ಅರಣ್ಯ ಇಲಾಖೆಯ ಕಣ್ಣುತಪ್ಪಿಸಿ ಕರೆದುಕೊಂಡು ಹೋಗಿದ್ದ ದಿಡುಪೆಯ ನವಗ್ರಹ ಹೋಮ್ ಸ್ಟೇ ಮಾಲೀಕ ಸಂತೋಷ್ ಗೆ ಕುದುರೆಮುಖ ವನ್ಯಜೀವಿ ವಿಭಾಗ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ದಂಡ ವಿಧಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಜು.20 ರಿಂದ ದಿಡುಪೆ ಫಾಲ್ಸ್ ( ಕಡಮಗುಂಡಿ) ಜಲ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಸುರಕ್ಷತೆಯ ಸಲುವಾಗಿ ಮುಂದಿನ ಆದೇಶದವರೆಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಆದರೆ ಇದರ ನಡುವೆ ದಿಡುಪೆಯ ಸಂತೋಷ್ ಮಾಲೀಕತ್ವದ ನವಗ್ರಹ ಹೋಮ್ ಸ್ಟೇಯಿಂದ 45 ಮಂದಿ ಪ್ರವಾಸಿಗರನ್ನು ಇಲಾಖೆಯ ಯಾವುದೇ ಅನುಮತಿ ಪಡೆಯದೆ, ನಿಯಮವಾಳಿಗಳನ್ನು ಗಾಳಿಗೆ ತೂರಿ ಆಕ್ರಮ ಪ್ರವೇಶಾತಿ ಮಾಡಿದ ಬಗ್ಗೆ ಆರ್ ಎಫ್ ಓಗೆ ಖಚಿತ ಮಾಹಿತಿ ಬಂದ ಹಿನ್ನಲೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ. ನಿಯಮ ಉಲ್ಲಘಿಂಸಿದ ಅವರಿಗೆ ಆ.16 ರಂದು ರೂ 22,500 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here