Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಸಿಪಿಐಎಂ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ ಸಿಪಿಐಎಂ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

2
0


ಬೆಳ್ತಂಗಡಿ; ಯುವಜನರ ಆಶಯವನ್ನು ಮನಗಂಡು ಪ್ರಜಾಪ್ರಭುತ್ವ ದೇಶವನ್ನು ಮುನ್ನಡೆಸುವುದೇ ಸ್ವತಂತ್ರ ಹೋರಾಟಗಾರರುಗಳ ಆಶಯವಾಗಿತ್ತು ಎಂದು ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಅಭಿಷೇಕ್ ಪದ್ಮುಂಜ ಹೇಳಿದರು.
ಅವರು ಇಂದು ಸಿಪಿಐಎಂ ಕಚೇರಿ ಇಎಂಎಸ್ ಭವನದಲ್ಲಿ ನಡೆದ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತಾಡುತ್ತಿದ್ದರು. ಭಗತ್‌ಸಿಂಗ್ ನಂತಹ ಕ್ರಾಂತಿಕಾರಿ ಹೋರಾಟಗಾರರು ಯುವಜನರು ಯುವ ಪೀಳಿಗೆಯು ಆಶಯಗಳ ಈಡೇರಿಕೆಗೆ ಸಮಾನತೆ, ಸ್ವಾಭಿಮಾನ, ಶೋ಼ಷ಼ಣಾರಹಿತ ಸಮಾಜಕ್ಕಾಗಿ ಹಾತೊರೆಯುತ್ತಾ ತ್ಯಾಗಮಯ ಹೋರಾಟ ನಡೆಸಿದವರು. ಅವರು ನಮಗೆ ಆದರ್ಶರಾಗಬೇಕು ಎಂದರು. ಎಲ್ಲಾ ಸ್ವಾತಂತ್ರ ಹೋರಾಟಗಾರರ ಆಶಯಗಳನ್ನು ಈಡೇರಿಸಲು ಕಟಿಬದ್ದರಾಗುವ ಪ್ರತಿಜ್ಞೆಗೈಯುವುದೇ ಸ್ವಾತಾಂತ್ರ್ಯ ದಿನಾಚರಣೆಯ ಮಹತ್ವ ಆಗಬೇಕು ಎಂದರು. ಪೂರ್ಣ ಸ್ವರಾಜ್ ಎಂಬುದು ಕೆಲವರ ಸ್ವಾತಂತ್ರದ ಬದುಕಿಗಾಗಿ ಮಾತ್ರ ಅಲ್ಲ ಭಾರತೀಯರೆಲ್ಲರ ಸಮಾನತೆಯ, ನೆಮ್ಮದಿ ಬದುಕಿಗಾಗಿ ಇರುವುದಾಗಿದೆ. ಅಂತಹ ಪೂರ್ಣ ಸ್ವರಾಜ್ಯ ಸಾಕಾರಗೊಳ್ಳಲು ಭಾರತವನ್ನು ಸಿದ್ದಪಡಿಸಲು ನಾವೆಲ್ಲರೂ ಮುಂದಾಗೋಣ ಎಂದರು.
ಈ ಸಂದರ್ಭ ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್, ಎಸ್.ಎಫ್.ಐ. ರಾಜ್ಯ ಮುಖಂಡರಾದ ವಿನುಶರಮಣ, ಸಿಐಟಿಯು ನಾಯಕರಾದ ಈಶ್ರವರಿ ಪದ್ಮುಂಜ, ಅಶ್ವಿತ, ಪುಷ್ಪೊ, ಅಪ್ಸರಾಲಿಯ ಸುಮಿತ್ರ ಮೊದಲಾದವರು ಇದ್ದರು. ಮೊದಲಿಗೆ ವಿನುಶರಮಣ ಸ್ವಾಗತಿಸಿ ಕೊನೆಗೆ ವಂದಿಸಿದರು.

LEAVE A REPLY

Please enter your comment!
Please enter your name here