Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ಕಂದಾಯ ನಿರೀಕ್ಷಕರಾಗಿ ಮಲ್ಲೇಶ್ ಕರ್ತವ್ಯಕ್ಕೆ ಹಾಜರು;ಪವಡಪ್ಪ ದೊಡ್ಡಮನಿ ಕರ್ತವ್ಯದಿಂದ ಬಿಡುಗಡೆ

ಬೆಳ್ತಂಗಡಿ : ಕಂದಾಯ ನಿರೀಕ್ಷಕರಾಗಿ ಮಲ್ಲೇಶ್ ಕರ್ತವ್ಯಕ್ಕೆ ಹಾಜರು;ಪವಡಪ್ಪ ದೊಡ್ಡಮನಿ ಕರ್ತವ್ಯದಿಂದ ಬಿಡುಗಡೆ

0

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 23 ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಕರ್ತವ್ಯ ಮಾಡಿ ಕಳೆದ ಏಳು ವರ್ಷಗಳಿಂದ ಕೊಕ್ಕಡ ಹೋಬಳಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಪವಡಪ್ಪ ದೊಡ್ಡಮನಿಯವರನ್ನು ಮೂಡಬಿದಿರೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸ್ಥಳಕ್ಕೆ ಸರಕಾರ ವರ್ಗಾವಣೆ ಮಾಡಿದ್ದು. ಮೂಡಬಿದಿರೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಕಳೆದ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಎಸ್. ಮಲ್ಲೇಶ್ ಅವರನ್ನು ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕ ಸ್ಥಳಕ್ಕೆ ಆ.31 ರಂದು ವರ್ಗಾವಣೆ ಮಾಡಲಾಗಿತ್ತು.

ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕರಾಗಿ ಜಿ.ಎಸ್. ಮಲ್ಲೇಶ್ ಅವರು ಬೆಳ್ತಂಗಡಿ ತಹಶೀಲ್ದಾರ್ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು. ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದರವರು ಕೊಕ್ಕಡ ಕಂದಾಯ ನಿರೀಕ್ಷಕರಾಗಿದ್ದ ಪವಡಪ್ಪ ದೊಡ್ಡಮನಿಯವರನ್ನು ಬೆಳ್ತಂಗಡಿ ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version