Home ರಾಜಕೀಯ ಸಮಾಚಾರ ವಿಮೆನ್ ಇಂಡಿಯಾ ಮೂವ್‌ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಪ್ರತಿನಿಧಿ ಸಭೆ; ಜನರನ್ನು ಒಗ್ಗೂಡಿಸುವುದೇ ನಾಯಕತ್ವ; ಅಬ್ದುಲ್...

ವಿಮೆನ್ ಇಂಡಿಯಾ ಮೂವ್‌ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಪ್ರತಿನಿಧಿ ಸಭೆ; ಜನರನ್ನು ಒಗ್ಗೂಡಿಸುವುದೇ ನಾಯಕತ್ವ; ಅಬ್ದುಲ್ ಖಾದರ್ ನಾವೂರು

2
0

ಬೆಳ್ತಂಗಡಿ, ಆ. 11: ವಿಮೆನ್ ಇಂಡಿಯಾ ಮೂವ್‌ಮೆಂಟ್ (ವಿಮ್) ಬೆಳ್ತಂಗಡಿ ಕ್ಷೇತ್ರ ಸಮಿತಿಯ ಅಸೆಂಬ್ಲಿ ಪ್ರತಿನಿಧಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬೆಳ್ತಂಗಡಿಯ ಜಮಿಯತುಲ್ ಫಲಾಹ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣವನ್ನು ವಿಮ್ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷೆ ಶಮಾ ಉಜಿರೆ ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತುಗಳಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್ ನಾವೂರು, “ನಾಯಕತ್ವ ಎನ್ನುವುದು ಕೇವಲ ಹುದ್ದೆ ಅಥವಾ ಅಧಿಕಾರವನ್ನು ಹೊಂದುವುದಲ್ಲ. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವರನ್ನು ಒಗ್ಗೂಡಿಸಿ, ಸಮಾಜದ ಅಭಿವೃದ್ಧಿಯತ್ತ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪರಿಣಾಮಕಾರಿ ನಾಯಕತ್ವವನ್ನು ರೂಪಿಸಬೇಕು. ಸಂಘಟನೆಯ ಬಲವರ್ಧನೆ ಹಾಗೂ ಜನಪರ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.

ವಿಮ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ಹಿಂದಿನ ಸಾಲಿನ ಕಾರ್ಯ ಚಟುವಟಿಕೆಯ ವರದಿಯನ್ನು ಕಾರ್ಯದರ್ಶಿಗಳಾದ ರುಬಿಯಾ ಬೆಳ್ತಂಗಡಿ ಮಂಡಿಸಿದರು.

ವಿಮೆನ್ ಇಂಡಿಯಾ ಮೂವ್‌ಮೆಂಟ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷೆಯಾಗಿ ರಫಾ ಬೆಳ್ತಂಗಡಿ, ಕಾರ್ಯದರ್ಶಿಯಾಗಿ ಅಝ್ವೀನ ಚಾರ್ಮಾಡಿ , ಉಪಾಧ್ಯಕ್ಷೆಯಾಗಿ ಮಸೂದ ಉಜಿರೆ, ಜೊತೆ ಕಾರ್ಯದರ್ಶಿಯಾಗಿ ಸುಮಯ್ಯ ಬಳ್ಳಮಂಜ ಹಾಗೂ ಕೋಶಾಧಿಕಾರಿಯಾಗಿ ಮರಿಯಮ್ಮ ಟಿ.ಎಸ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ನಫ್ಸೀರಾ, ಸೆಲಿಕ, ಸೌದ ಹಾಗೂ ನಸೀಮಾ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಯನ್ನು ಎಸ್‌ಡಿಪಿಐ ಮಂಗಳೂರು ಜಿಲ್ಲಾ ಸಮಿತಿ ಸದಸ್ಯರಾದ ಝೀನತ್ ಬಂಟ್ವಾಳ ಹಾಗೂ ಝರೀನ ಉಪ್ಪಿನಂಗಡಿ ನಡೆಸಿಕೊಟ್ಟರು.

ಕಾರ್ಯಕ್ರಮದ ಸಮಾರೋಪ ಭಾಷಣವನ್ನು ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ತ್ವಾಹಿರ್ ಬಂಗೇರಕಟ್ಟೆ ನೆರವೇರಿಸಿದರು.

ರುಬಿಯಾ ಬೆಳ್ತಂಗಡಿ ಸ್ವಾಗತಿಸಿದರು, ಅಝ್ವೀನ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here