
ಬೆಳ್ತಂಗಡಿ; ಸಂತ ಮರಿಯಮ್ಮನವರ ದೇವಾಲಯ ಪುದುವೆಟ್ಟು -ಬೊಲ್ಮನಾರು ಇದರ ವತಿಯಿಂದ ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿಯವರು ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ “ಬೆಸ್ಟ್ ಎಂಎಲ್ಎ” ಅವಾರ್ಡ್ ಪಡೆದ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ನಿವಾಸಕ್ಕೆ ಆಗಮಿಸಿ ಆತ್ಮೀಯವಾಗಿ ಅಭಿನಂದಿಸಿ, ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳಾದ ರೆ.ಫಾ. ಸೇಬಾಸ್ಟಿನ್ ಪುನ್ನತಾನತ್, ಚರ್ಚ್ ನ ಆಡಳಿತ ಮಂಡಳಿ ಟ್ರಸ್ಟಿಗಳಾದ ಜಿಜೋ, ವಿನೋಯ್, ಜೋಸೆಫ್ ಕೆ. ವಿ, ಜೋಸೆಫ್ ಪಿ. ಎಮ್, ಜೋಬಿ, ಸೋಯ್ ಕೆ ಜೆ ಬಾಬು, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.