
ಬೆಳ್ತಂಗಡಿ:ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದ್ದು ನರ ಹಂತಕ ಕಾಡಾನೆ ಇನ್ನೂ ಕೊಕ್ಕಡ ಪರಿಸರದಲ್ಲಿಯೇ ಓಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಮಂಗಳವಾರ ರಾತ್ರಿಯ ವೇಳೆ ಹತ್ಯಡ್ಕ ಗ್ರಾಮದ ದರ್ಭೇತಡ್ಕ ದಿನಕರ ಗೋಖಲೆ ಯವರಲ್ಲಿ ಮನೆಯಿಂದ 40-50ಫೀಟು ಸಮೀಪ ಕಾಡಾನೆ ಬಂದಿದ್ದು ತೋಟದಲ್ಲಿ ವ್ಯಾಪಕವಾಗಿ ಕೃಷಿಗೆ ಹಾನಿಯುಂಟು ಮಾಡಿದೆ. ತೋಟದಲ್ಲಿನ ತೆಂಗಿನ ಗಿಡಗಳನ್ನು ಹಾಗೂ ಬಾಳೆ ಅಡಿಕೆ ಗಿಡಗಳನ್ನು ನಾಶಗೊಳಿಸಲಾಗಿದೆ ಕಾಡಾನೆಗಳು ಪ್ರತಿನಿತ್ಯ ಈ ಪರಿಸರದಲಲ್ಲಿ ಓಡಾಟ ನಡೆಸುತ್ತಿದ್ದು ಜನರು ಮನೆಗಳಿಂದ ಹೊರ ಬರಲೂ ಭಯ ಪಡುವಂತಹ ವಾತಾವರಣವಿದೆ
ಕೊಕ್ಕಡ ಪರಿಸರದಲ್ಲಿ ಈಗಾಗಲೇ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದು ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇಲಾಖೆಯ ನಿರ್ಲಕ್ಷ್ಯದ ವಿರುದ್ದ ಹೋರಾಟ ನಡೆಸಲು ಸ್ಥಳೀಯ ನಾಗರಿಕರು ಸಿದ್ದತೆ ನಡೆಸುತ್ತಿದ್ದಾರೆ.













