
ನೆರಿಯ : ಕಕ್ಕಿಂಜೆ – ಅಣಿಯೂರು ಮುಖ್ಯ ರಸ್ತೆಯ ಬಯಲು ಶಾಲೆಯ ಬಳಿ ಬೈಕ್ ಮತ್ತು ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ಜು.21ರಂದು ನಡೆದಿದೆ.
ಬಯಲು ದಡ್ಡು ನಿವಾಸಿ ಗಣೇಶ್ ರವರು ತನ್ನ ಬೈಕ್ ನಲ್ಲಿ ಅಣಿಯೂರುನಿಂದ ಬಯಲು ಕಡೆ ಬರುತ್ತಿರುವ ವೇಳೆ ಬಯಲು ಶಾಲೆಯ ರಸ್ತೆಯ ಬಳಿಯಿಂದ ಸ್ಕೂಟರ್ ನಲ್ಲಿ ಬರುತ್ತಿದ್ದ ಬೀಜದಡಿ ನಿವಾಸಿ ಬಾಲಣ್ಣ ರವರ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಗಣೇಶ್ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಾಲಣ್ಣ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಳಿಸಲಾಗಿದೆ.










