Home ಅಪರಾಧ ಲೋಕ ಮೂಡಬಿದಿರೆ : ತಲ್ವಾರ್ ಹಿಡಿದು ಯುವಕನಿಂದ ಭಯದ ವಾತಾವರಣ ಸೃಷ್ಟಿ; ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ...

ಮೂಡಬಿದಿರೆ : ತಲ್ವಾರ್ ಹಿಡಿದು ಯುವಕನಿಂದ ಭಯದ ವಾತಾವರಣ ಸೃಷ್ಟಿ; ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಯುವಕರು

3
0

ಮೂಡಬಿದಿರೆ : ಯುವಕನೊಬ್ಬ ತಲ್ವಾರ್ ಹಿಡಿದು ಮೂಡಬಿದಿರೆ ಬಸ್ ನಿಲ್ದಾಣದ ಸುತ್ತಮುತ್ತ ಜು‌.18 ರಂದು ಸಂಜೆ ಭಯದ ವಾತಾವರಣ ಸೃಷ್ಟಿಸಿ ಬಳಿಕ ಮೊಬೈಲ್ ಅಂಗಡಿಯೊಂದಕ್ಕೆ ಹೋಗಿ ತಲ್ವಾರ್ ತೋರಿಸಿ ಬೊಬ್ಬೆ ಹಾಕಿ ಮೊಬೈಲ್ ಕೊಡುವಂತೆ ಬೆದರಿಕೆ ಹಾಕಿದ್ದಾನೆ.

ಮೊಬೈಲ್ ಅಂಗಡಿಯಲ್ಲಿ ತಲ್ವಾರ್ ಹಿಡಿದು ಬೆದರಿಕೆ ಹಾಕುವ ವೇಳೆ ಹೊರಗಡೆ ಇದ್ದ ಯುವಕರ ತಂಡವೊಂದು ಸಮಯ ಪ್ರಜ್ಞೆಯಿಂದ ಯುವಕನ ಕೈಯಿಂದ ತಲ್ವಾರ್ ಎಳೆದು ಹಿಡಿದು ಮೂಡಬಿದಿರೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ ತಲ್ವಾರ್ ಹಿಡಿದು ಬೆದರಿಸಿದ ಯುವಕ ಬಂಟ್ವಾಳ ತಾಲೂಕಿನ ಕಕ್ಕೆಪದವು ನಿವಾಸಿ ರಾಜೇಶ್ ಎಂದು ತಿಳಿದು ಬಂದಿದ್ದು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. ತಲ್ವಾರ್ ಹಿಡಿದು ಓಡಾಡುವ ವಿಡಿಯೋ ಹಾಗೂ ಮೊಬೈಲ್ ಶಾಪ್ ನಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

LEAVE A REPLY

Please enter your comment!
Please enter your name here