
ಬೆಳ್ತಂಗಡಿ : ತನ್ನ ಮನೆಯಿಂದ ಕೆಲಸದ ನಿಮ್ಮಿತ್ತ ಬಂದಿದ್ದ ಯುವಕನ ಬೈಕ್ ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ನಗರದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕುಕ್ಕಲ ಗ್ರಾಮದ ಬೇರ್ಕಲ ನಿವಾಸಿ ಸ್ವರೂಪ್ ಎಂಬಾತ ಜು.16 ರಂದು ಬೆಳಗ್ಗೆ 11 ಗಂಟೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಅಕ್ಷಯ ಜೆರಾಕ್ಷ್ ಅಂಗಡಿ ಪಕ್ಕದಲ್ಲಿ KA-21-V-8978 ನಂಬರಿನ ಬಜಾಜ್ ಸಿಟಿ 100 ಬೈಕ್ ಪಾರ್ಕಿಂಗ್ ಮಾಡಿ ಬೇರೆ ಕೆಲಸಕ್ಕೆಂದು ಹೋಗಿ ವಾಪಸ್ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗಲು 11:30 ಕ್ಕೆ ಬೈಕ್ ಬಳಿ ಬಂದಾಗ ಕಾಣಿಯಾಗಿತ್ತು. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಬೈಕ್ ಪತ್ತೆಯಾಗಿಲ್ಲ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನವಾಗಿರುವ ಬಗ್ಗೆ ಜು.17 ರಂದು ಸ್ವರೂಪ್ ದೂರು ನೀಡಿದ್ದಾರೆ.
ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.