
ಬೆಳ್ತಂಗಡಿ: ನೆರಿಯ ಗ್ರಾಮದ ಎಸ್ಟೇಟ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ಕಾರಿನಲ್ಲಿ ಹೋಗುತ್ತಿದ್ದ ವೇಳೆ ಎಸ್ಟೇಟ್ ಒಳಗೆ ದೊಡ್ಡಗಾತ್ರದ ಚಿರತೆ ಕಾಣಿಸಿದೆ, ಜನರನ್ನು ನೋಡಿ ಚಿರತೆ ಒಳಕಾಡಿನತ್ತ ಓಡಿದೆ.
ಕೆಲವು ತಿಂಗಳುಗಳ ಹಿಂದೆ ನೆರಿಯದ ಇದೇ ಪರಿಸರದಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಚಿರತೆ ಕಾಣಿಸಿಕೊಂಡಿತ್ತು.
ತಾಲೂಕಿನಲ್ಲಿ ನಿರಂತರ ಚರತೆಯ ಹಾವಳಿ;
ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಹಾವಳಿ ನಿರಂತರವಾಗಿ ಮುಂದುವರಿದಿದೆ. ಕೆಲ ದಿನಗಳ ಹಿಂದೆ ಬೆಳಾಲು ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಾರ್ಮಾಡಿ ಘಾಟಿಯಲ್ಲಿ ಚಿರತೆ ಕಾಣಿಸಿಕೊಂಡು ವಾಹನ ಸವಾರರಲ್ಲಿ ಆತಂಕಮೂಡಿಸಿತ್ತು. ಮುಂಡಾಜೆ, ಕಲ್ಮಂಜ ಪರಿಸರದಲ್ಲಿಯೂ ನಿರಂತರ ವಾಗಿ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ನೆರಿಯದಲ್ಲಿ ಕಾಣಿಸಿಕೊಂಡಿದೆ.










