Home ಸ್ಥಳೀಯ ಸಮಾಚಾರ ಬೆಳ್ತಂಗಡಿ : ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ವರ್ಗಾವಣೆ ಆರ್ ಎಫ್ ಓ ಆಗಿ ಮಹೇಶ್ ದೇವಾಡಿಗ...

ಬೆಳ್ತಂಗಡಿ : ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ವರ್ಗಾವಣೆ ಆರ್ ಎಫ್ ಓ ಆಗಿ ಮಹೇಶ್ ದೇವಾಡಿಗ ಅಧಿಕಾರ ಸ್ವೀಕಾರ

2
0

ಬೆಳ್ತಂಗಡಿ : 19 ಮಂದಿ ಅರಣ್ಯಾಧಿಕಾರಿಗಳನ್ನು (RFO) ಸರಕಾರ ವರ್ಗಾವಣೆ ಮಾಡಿ ಆದೇಶ ಮಾಡಿದೆ.ಮಂಗಳೂರು ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ (RFO) ಟಿ. ಎನ್. ತ್ಯಾಗರಾಜ್ ಅವರನ್ನು ಬೆಂಗಳೂರು ಗ್ರೇಟರ್ ಪ್ರಾಧಿಕಾರ (ಕೇಂದ್ರ ವಲಯ) ಕ್ಕೆ ವರ್ಗಾವಣೆ ಮಾಡಲಾಗಿದ್ದು. ತೆರವಾದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ(RFO) ಜಾಗಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಕ್ಯಾದಗಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ ದೇವಾಡಿಗ ಅವರನ್ನು ನೇಮಕ ಮಾಡಿ ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೇ.28 ರಂದು ಆದೇಶ ಹೊರಡಿಸಿದ್ದರು.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ಟಿ. ಎನ್. ತ್ಯಾಗರಾಜ್ ಅವರು 2024 ಆಗಷ್ಟ್ 21ರಿಂದ ಬೆಳ್ತಂಗಡಿ ಆರ್ ಎಫ್ ಓ ಆಗಿ ಕರ್ತವ್ಯ ಸೇವೆ ಸಲ್ಲಿಸಿದ್ದ ಜನಸ್ನೇಹಿ ಅಧಿಕಾರಿಯಾಗಿದ್ದ ಅವರು ಹಲವರು ಪ್ರಕರಣ ದಾಖಲಿಸಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದ ಅಧಿಕಾರಿಯಾಗಿದ್ದರು..

ಪ್ರಸ್ತುತ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಾಡಿಗ ಅವರು ಜು.16 ರಂದು ಅಧಿಕಾರ ಸ್ವೀಕಾರಿಸಿಕೊಂಡಿದ್ದಾರೆ. ಇವರು ಸುಬ್ರಹ್ಮಣ್ಯದ ನೆಟ್ಟಣ ಡಿಪ್ಪೋ, ಚಿಕ್ಕಮಗಳೂರು, ಮೂಡಿಗೆರೆ, ಸಿದ್ದಾಪುರ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here