Home ಕ್ರೀಡಾ ಸಮಾಚಾರ ನಮ್ಮೂರಿಗೂ ಬಂದ ವಿಶ್ವಕಪ್ ಫುಟ್ಬಾಲ್ ಪ್ರೀತಿ ಧರ್ಮಸ್ಥಳದಲ್ಲಿ ರಾರಾಜಿಸುತ್ತಿದೆ ಮೆಸ್ಸಿ, ರೊನಾಲ್ಡೊ ಫ್ಲೆಕ್ಸ್ ಗಳು

ನಮ್ಮೂರಿಗೂ ಬಂದ ವಿಶ್ವಕಪ್ ಫುಟ್ಬಾಲ್ ಪ್ರೀತಿ ಧರ್ಮಸ್ಥಳದಲ್ಲಿ ರಾರಾಜಿಸುತ್ತಿದೆ ಮೆಸ್ಸಿ, ರೊನಾಲ್ಡೊ ಫ್ಲೆಕ್ಸ್ ಗಳು

9
0

ಬೆಳ್ತಂಗಡಿ; ಜಗತ್ತಿನೆಲ್ಲೆಡೆ ಫುಟ್ಬಾಲ್ ಹುಚ್ಚು ಹಿಡಿಸಿತ್ತಿದೆ ನಮ್ಮ ದೇಶ ಈ ವಿಶ್ವಕಪ್ ನಲ್ಲಿ ಆಡುವ ಅವಕಾಶ ಪಡೆದುಕೊಳ್ಳದಿದ್ದರೂ ನಮ್ಮಲ್ಲಿಯೀ ಫುಟ್ಬಾಲ್ ಪ್ರೀತಿಗೇನು ಕಡಿಮೆಯಿಲ್ಲ ಗ್ರಾಮೀಣಪ್ರದೇಶವಾದ ಧರ್ಮಸ್ಥಳ ದಲ್ಲಿಯು ಮೆಸ್ಸಿ ರೊನಾಲ್ಡೊ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ಇವರಿಬ್ಬರಿಗಿಗೂ ಇಲ್ಲಿಯೂ ಅಭಿಮಾನಿಗಳ ಪಡೆಯೇ ಇದೆ.
ಮೆಸ್ಸಿ ಅಭಾಮಾನಿಗಳು ರೊನಾಲ್ಡೊ ಅಭಿಮಾನಿಗಳು ಧರ್ಮಸ್ಥಳ ಕಲ್ಲೇರಿಯಲ್ಲಿ ಫ್ಲೆಕ್ಸ್ ಗಳನ್ನು ಸ್ಥಾಪಿಸುವ  ಮೂಲಕ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಈಮೂಲಕ ಭಾರತದಲ್ಲಿ ಕ್ರಿಕೆಟ್ ಗೆ ಮಾತ್ರವಲ್ಲ ಫುಟ್ಬಾಲಿಗೂ ಅಭಿಮಾನಿಗಳಿದ್ದಾರೆ ಎಂಬಯದನ್ನು ತೋರಿಸುತ್ತಿದ್ದಾರೆ.
ಧರ್ಮಸ್ಥಳದ ಫುಟ್ಬಾಲ್ ಪ್ರೇಮಿ ಯುವಕರಾದ ಅಭಿದೇವ್ ಅರಿಗ, ಅಖಿಲ್ ಥೋಮಸ್, ಅನ್ವಿತ್ ಬಲ್ಲಳ್, ರೋಬಿನ್, ಜಾನ್ಸನ್ ಹೀಗೆ ಹಲವರು ಇದರ ಹಿಂದಿದ್ದಾರೆ. ಈ ಬಾರಿಯ ವಿಶ್ವ ಚಾಂಪಿಯನ್ ಯಾರು ಎಂಬ ಚರ್ಚೆಯೂ ಇಲ್ಲಿ ಜೋರಾಗಿಯೇ ನಡೆಯುತ್ತಿದೆ.

LEAVE A REPLY

Please enter your comment!
Please enter your name here