Home ಅಪರಾಧ ಲೋಕ ಸುರತ್ಕಲ್ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ ಅಪಹರಿಸಿದ ಕಾರು ಬಂಟ್ವಾಳದಲ್ಲಿ ಪತ್ತೆ ಹಚ್ಚಿದ ಪೊಲೀಸರು

ಸುರತ್ಕಲ್ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ ಅಪಹರಿಸಿದ ಕಾರು ಬಂಟ್ವಾಳದಲ್ಲಿ ಪತ್ತೆ ಹಚ್ಚಿದ ಪೊಲೀಸರು

4
0

ಮಂಗಳೂರು: ಸುರತ್ಕಲ್ ಸಮೀಪದ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂ.29 ರಂದು ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಸಿನಿಮಾ ಶೈಲಿಯಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿದ ದರೋಡೆಕೋರರ ಗುಂಪೊಂದು, ಕುಟುಂಬಸ್ಥರನ್ನು ಬೆದರಿಸಿ ಸುಮಾರು ₹20 ಲಕ್ಷ ಮೌಲ್ಯದ ಚಿನ್ನ ಮತ್ತು ನಗದನ್ನು ದೋಚಿ ಪರಾರಿಯಾಗಿತ್ತು.

ಇದೀಗ ದರೋಡೆಕೋರರು ಕೊಂಡೊಯ್ದಿದ್ದ ಚಿನ್ನದ ವ್ಯಾಪಾರಿಯ ವಿಕಾಸ್ ಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರು ಬಂಟ್ವಾಳ ತಾಲೂಕಿನ ಕಲ್ಪನೆ ಎಂಬಲ್ಲಿ ಜೂನ್ 30 ರಂದು ಪತ್ತೆಯಾಗಿದೆ. ಇನ್ನು ಸೀಟ್ ಕವರ್‌ಗಳನ್ನೂ ಸಹ ಹರಿದು ಹಾಕಿ ದರೋಡೆಕೋರರು ವಾಹನವನ್ನು ಸಂಪೂರ್ಣವಾಗಿ ಹುಡುಕಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಲಭ್ಯವಿರುವ ಸುಳಿವುಗಳ ಬೆನ್ನತ್ತಿ ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here