ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಯಡ್ಕ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ (MCK)ಯ ಅನಧಿಕೃತ ಹಾಟ್ ಮಿಕ್ಸ್ ಮತ್ತು ಕಾಂಕ್ರೀಟ್ ಮಿಶ್ರಣ ಘಟಕ ನಡೆಯುತ್ತಿದೆ ಎಂದು ನವದೆಹಲಿಯ ರಾಷ್ಟ್ರೀಯ ಅನುಸೂಚಿತ ಪಂಗಡಗಳ ಆಯೋಗ, ದೂರು ಅರ್ಜಿ ಸಲ್ಲಿಕೆಯಾಗಿದ್ದು ಸದ್ರಿ ಸ್ಥಳವನ್ನು ಪರಿಶೀಲನೆ ನಡೆಸಲು ಪುತ್ತೂರು ವಿಭಾಗ ಆಯುಕ್ತರಾದ ಸ್ಟೇಲ್ಲಾ ವರ್ಗಿಸ್ ಸೇರಿದ್ದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮುಗ್ರೋಡಿ ಅವರ ಘಟಕಕ್ಕೆ ಭೇಟಿ ನೀಡಿ ಸ್ಥಳ ತನಿಖೆ ನಡೆಸಿದ ಘಟನೆ ಜೂ.30 ರಂದು ಮಧ್ಯಹ್ನಾ 3:30 ಗಂಟೆಗೆ ನಡೆದಿದೆ.
ಈ ಬಗ್ಗೆ ದೆಹಲಿಯ ರಾಷ್ಟ್ರೀಯ ಅನುಸೂಚಿತ ಪಂಗಡಗಳ ಆಯೋಗಕ್ಕೆ ಸ್ಥಳೀಯರು ದೂರು ನೀಡಿದ ಹಿನ್ನಲೆಯಲ್ಲಿ ಆಯೋಗ ಜಿಲ್ಲಾದಿಕಾರಿಗಳಲ್ಲಿ ವರದಿ ಕೇಳಿದ್ದರು ಅದರಂತೆ ಜಿಲ್ಲಾಧಿಕಾರಿಗಳು ಸದ್ರಿ ಸ್ಥಳವನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರಿಗೆ ಆದೇಶಿಸಿದ್ದು ಹಾಗಾಗಿ ಜೂ.23 ರಂದು ಸಹಾಯಕ ಆಯುಕ್ತರು ಸ್ಥಳ ತನಿಖೆಯ ದಿನಾಂಕ ಸೂಚಿಸಿ ನೋಟಿಸ್ ರವಾನಿಸಿದ್ದರು.
ಹಾಟ್ ಮಿಕ್ಸ್ ಘಟಕ್ಕೆ ಭೇಟಿ ನೀಡಿದ ಅವರು ಅಲ್ಲಿನ ನಿವಾಸಿಗಳ ಜನರ ಸಮಸ್ಯೆಯನ್ನು ಆಲಿಸಿದರು.ಬಳಿಕ ಘಟಕ ಇರುವ ಪ್ರದೇಶವನ್ನು ಪರಿಶೀಲನೆ ನಡೆಸಿದರು. ಘಟಕದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವರದಿ ನೀಡುವಂತೆ ಗ್ರಾ.ಪಂ.ಪಿಡಿಓ ಹಾಗೂ ಗ್ರಾಮಾಡಳಿತಾಧಿ ಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜತ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿರುಪತಿ, ನಡ ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರನಾಥ್ ನಾಯ್ಕ್, ಗ್ರಾಮಾಡಳಿತಾಧಿಕಾರಿ ರನಿತಾ, ಬೆಳ್ತಂಗಡಿ ಉಪ ವಿಭಾಗ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ಎಇಇ ಜರ್ನಾದನ, ಹಾಟ್ ಮಿಕ್ಸ್ ಪ್ಲಾಂಟ್ ಪ್ರಮುಖರು, ಅರ್ಜಿದಾರರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.










