ಬೆಳ್ತಂಗಡಿ : ಉಜಿರೆ ಗುರಿಪಳ್ಳ ರಸ್ತೆಯ ಅಂಬಡೆಬೆಟ್ಟು ನೂತನ ಸೇತುವೆ ನಿರ್ಮಾಣ ವಾಗುತ್ತಿದ್ದು. ಇಲ್ಲಿ ತಾತ್ಕಾಲಿಕವಾಗಿ ಮೋರಿ ಅಳವಡಿಸಿ ನಿರ್ಮಿಸಲಾಗಿದ್ದ ರಸ್ತೆ ಜೂ. 29ರಂದು ಸುರಿದ ಭಾರಿ ಮಳೆಗೆ ಕೊಚ್ಚಿ ಹೋಗಿದೆ.
ಜೂನ್ ಆರಂಭದಲ್ಲಿ ಸುರಿದ ಮಳೆಗೆ ಅಂಬಡಬೆಟ್ಟು ಎಂಬ ಪ್ರದೇಶದಲ್ಲಿ ಹರಿಯುವ ನದಿಗೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಕೊಚ್ಚಿ ಹೋಗಿತ್ತು.
ಕನ್ಯಾಡಿ-1 ಗ್ರಾಮ ವ್ಯಾಪ್ತಿಯ ಪ್ರದೇಶದ ಜನರಿಗೆ ಉಜಿರೆ ಹಾಗೂ ಇತರೆಡೆಯ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಉಜಿರೆ, ನಿಡಿಗಲ್ ಮೂಲಕ ನಡ, ಇಂದಬೆಟ್ಟು ಕೊಲ್ಲಿ, ಗುರಿಪಳ್ಳ, ಪಡ್ಡು, ಕಯ್ಯಂಗು ಮೊದಲಾದ ಪ್ರದೇಶದ ಸಾವಿರಾರು ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ಅಂಬಡಬೆಟ್ಟು ರಸ್ತೆಯಾಗಿದ್ದು. ಇಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ.
ಇನ್ನು ಒಂದು ತಿಂಗಳಲ್ಲಿ ಸೇತುವೆ ಸಂಚಾರ ಯೋಗ್ಯವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ ಸ್ಥಳೋಯರು ಬದಲಿ ರಸ್ತೆಯ ಮೂಲಕ ಸಂಚರಿಸುವಂತೆ ಗ್ರಾಮಪಂಚಾಯತು ಆಡಳಿತ ವಿನಂತಿಸಿದೆ










