ಬೆಳ್ತಂಗಡಿ; ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಶತಮಾನೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಜೂ.26 ರಂದು ಜುಮಾ ನಮಾಝ್ ಬಳಿಕ ಗುರುವಾಯನಕೆರೆ ಮಸ್ಜಿದ್ ಮತ್ತು ದರ್ಗಾಶರೀಫ್ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು.
ಧ್ವಜಾರೋಹಣವನ್ನು ಜಮಾತ್ ಖತೀಬ್ ಅಬ್ದುಲ್ ಬಾರಿ ಸಅದಿ ನೇರವೇರಿಸಿದರು.
ಜಮಾಅತ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಕರ್ನಾಟಕ ಮುಸ್ಲಿಂ ಜಮಾಅತ್ ಸರ್ಕಲ್ ಅಧ್ಯಕ್ಷ ಹಮೀದ್ ಮುಸ್ಲಿಯಾರ್, ಎಸ್‌ವೈಎಸ್ ಸರ್ಕಲ್ ಅಧ್ಯಕ್ಷ ಹಾಜಿ ಹಸೈನಾರ್ ಶಾಫಿ, ಎಸ್‌ಎಮ್‌ಎ ಅಧ್ಯಕ್ಷ ಉಮರಬ್ಬ, ಆದಂ ಸಾಹೇಬ್, ಎಸ್‌ವೈಎಸ್ ಸಂಘಟನಾ ಕಾರ್ಯದರ್ಶಿ ಅಶ್ರಫ್, ಯುನಿಟ್ ಯುನಿಟ್ ಕಾರ್ಯದರ್ಶಿ ಉಸ್ಮಾನ್ ಅಲಾದಿ, ಸ್ಥಳೀಯ ಮಸೀದಿಯ ಉಸ್ತಾದರುಗಳು, ಜಮಾಅತ್ ಕಮಿಟಿ ಕಾರ್ಯದರ್ಶಿ ಹನೀಫ್, ಕೋಶಾಧಿಕಾರಿ ಲತೀಫ್, ಸದಸ್ಯ ಮುಸ್ತಫ ಕೆ ಪಿ ಹಾಗೂ ಜಮಾಅತ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಸುನ್ನಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು, ಹಿರಿಯರು ಜಮಾಅತ್ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಿದರು.
