Home ಅಂಕಣಗಳು ಸ್ನೇಹಕಿರಣ ಜಿಲ್ಲಾ ಮಹಿಳಾ ಒಕ್ಕೊಟ ಮಹಾಸಭೆ ನೂತನ ಪದಾಧಿಕಾರಿಗಳ ಆಯ್ಕೆ

ಸ್ನೇಹಕಿರಣ ಜಿಲ್ಲಾ ಮಹಿಳಾ ಒಕ್ಕೊಟ ಮಹಾಸಭೆ ನೂತನ ಪದಾಧಿಕಾರಿಗಳ ಆಯ್ಕೆ

0

ಬೆಳ್ತಂಗಡಿ; ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ‌ಹಾಗೂ ಒಕ್ಕೂಟ ಬಲವರ್ಧನೆ ತರಬೇತಿಯನ್ನು ದಿನಾಂಕ ಜೂ 25 ರಂದು ಸಾನ್ತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು. ಒಕ್ಕೂಟದ ಅಧ್ಯಕ್ಷರಾದ ಎಲಿಯಮ್ಮ ತೋಮಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಸಿಸಿಲ್ಯಾ ತಾವ್ರೊರವರು ಒಕ್ಕೂಟಗಳ ಸದಸ್ಯರು ನಾಯಕತ್ವ ವಹಿಸಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಡಿ.ಕೆ.ಆರ್. ಡಿ. ಎಸ್ ಸಂಸ್ಥೆಯ ನಿರ್ದೇಶಕರಾದ ಫಾ. ಆದರ್ಶ್ ಪಿ.ಎಸ್ ರವರು ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸಮಿತಿ ಸದಸ್ಯರ ಜವಾಬ್ದಾರಿಗಳು ಮತ್ತು ಕರ್ತವ್ಯಗಳು ಮತ್ತು ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು. 2026 ರಿಂದ 2029 ರವರೆಗಿನ ಸ್ನೇಹ ಕಿರಣ್ ಜಿಲ್ಲಾ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಉಷಾ ಜೋಯ್, ಉಪಾಧ್ಯಕ್ಷರಾಗಿ ಫಿಲೋಮಿನ ಸಿಜೆ, ಕಾರ್ಯದರ್ಶಿಯಾಗಿ ವೈಶಾಲಿ, ಜೊತೆ ಕಾರ್ಯದರ್ಶಿಯಾಗಿ ಚಂದನ ಕೋಶಾಧಿಕಾರಿಯಾಗಿ ಮಂಜುಳ ಜಾನ್ ಹಾಗೂ ಸಮಿತಿ ಸದಸ್ಯರಾಗಿ ಮಿನಿ ತೋಮಸ್, ಉಷಾ, ಡೈಸಿ, ಪ್ರಿನ್ಸಿ ಇವರನ್ನು ಆಯ್ಕೆ ಮಾಡಲಾಯಿತು. ಪ್ರಿನ್ಸಿ ಸ್ವಾಗತಿಸಿ, ಜಿನ್ಸಿ ರಾಜೇಶ್ ವಂದಿಸಿದರು. ಸ್ನೇಹ ಕಿರಣ್ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version