Home ಅಪರಾಧ ಲೋಕ ಗಿರೀಶ್ ಮಟ್ಟಣ್ಣನವರ್ ವಿರದ್ದ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ FIR ರದ್ದುಪಡಿಸಿದ ಹೈಕೋರ್ಟ್

ಗಿರೀಶ್ ಮಟ್ಟಣ್ಣನವರ್ ವಿರದ್ದ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ FIR ರದ್ದುಪಡಿಸಿದ ಹೈಕೋರ್ಟ್

0

ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣವ‌ರ್ ವಿರುದ್ಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್ ಐ ಆರ್ ಅನ್ನು ಮಾನ್ಯ ಹೈ ಕೋರ್ಟ್ ರದ್ದುಗೊಳಿಸಿ ಪ್ರಕರಣ ಮುಕ್ತಾಯಗೊಳಿಸಿ ಜೂ.23 ರಂದು ಆದೇಶ ಹೊರಡಿಸಿದೆ.

ವ್ಯಕ್ತಿ ವಿರುದ್ಧ Mud ಸ್ಲಾಗಿಂಗ್, ವ್ಯಂಗ್ಯ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಆರೋಗ್ಯಕರ ಟೀಕೆ ಮಾಡುವುದು ಒಳ್ಳೆಯದು.
ವ್ಯಕ್ತಿಗಳ ವಿರುದ್ಧ ಆರೋಗ್ಯ ಟೀಕೆಗಳಿಗೆ ಅಭ್ಯಂತರ ಇಲ್ಲ ಎಂದು ನ್ಯಾಯಾಲಯ ಗಿರೀಶ್ ಮಟ್ಟಣ್ಣನವರ್ ಅವರಿಗೆ ಬುದ್ಧಿವಾದ ಹೇಳಿದೆ. ಮಾನ್ಯ ನ್ಯಾಯಾಲಯದ ಸೂಚನೆಗೆ ಗೌರವ ನೀಡಿ ಅರ್ಜಿದಾರ ಮತ್ತು ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ತಮ್ಮ ಸ್ವಯಂ ಪ್ರೇರಿತ ಪ್ರಮಾಣ ಪತ್ರದಲ್ಲಿ ತಾವು ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರಾಗಿದ್ದು ಕ್ಷೇತ್ರದ ಕುರಿತು ಅಪಾರ ನಂಬಿಕೆ ಶ್ರದ್ದೆ ಹೊಂದಿದ್ದು ಈ ಹಿಂದೆ ಯಾವತ್ತೂ ಕ್ಷೇತ್ರದ ಕುರಿತು ಅಪಚಾರ ಮಾಡಿಲ್ಲ. ತಮ್ಮ ಧ್ವನಿ ಸೌಜನ್ಯ ಮತ್ತು ಇತರ ಭೀಕರ ಪ್ರಕರಣಗಳ ಕುರಿತು ನ್ಯಾಯದ ಅನ್ವೇಷಣೆ ಆಗಿರುತ್ತದೆ ಹೊರತು ದೇವಸ್ಥಾನದ ಅಥವಾ ದೇವರ ವಿರುದ್ಧ ಅಲ್ಲ. ಇನ್ನು ಮುಂದೆಯೂ ಅತ್ಯಾಚಾರ ಕೊಲೆ ಕಾಣೆಯಾದ ಪ್ರಕರಣ ಹಾಗೂ ಶೋಷಣೆ ವಿರುದ್ಧ ಕಾನೂನು ರೀತಿಯಲ್ಲಿ ಅಪವಾದ ವಿವಾದಗಳಿಗೆ ಅವಕಾಶ ಕೊಡದೆ ಸಂತ್ರಸ್ತರು ಶೋಷಿತರ ಪರ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ.
ಈ ಪ್ರಮಾಣ ಪತ್ರದಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ತಮ್ಮ ಸಂವಿಧಾನಿಕ ವಾಕ್‌ ಸ್ವಾತಂತ್ರಕ್ಕೆ ಧಕ್ಕೆ ಬರಬಾರದು ಎಂದು ವಿನಮ್ರ ಪೂರಕ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಮಾನ್ಯ ಉಚ್ಚ ನ್ಯಾಯಾಲಯ ಅರ್ಜಿದಾರರ ( ಗಿರೀಶ್ ಮಟ್ಟಣ್ಣನವ‌ರ್) ವಾಕ್ ಸ್ವತಂತ್ರ Freedom of Speech ತಡೆಯುವ ಹಾಗಿಲ್ಲ ಎಂದು ಅಭಯ ನೀಡಿ ಆರೋಗ್ಯಕರ ಟೀಕೆ ಪ್ರಶ್ನೆಗಳಿಗೆ ಅವಕಾಶ ಇದೆ ಎಂದು ಮಾನ್ಯ ಹೈಕೋರ್ಟ್ ಸೂಚನೆ ನೀಡಿದೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ರಂಗನಾಥ ರೆಡ್ಡಿ ಅವರು ನಮ್ಮ ಅರ್ಜಿದಾರರು ಸೌಜನ್ಯ ನ್ಯಾಯಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರಿಂದ ಈ ರೀತಿ ಎಲ ಬರುತ್ತಿವೆ. ಅವರು ಯಾವತ್ತೂ ದೇವಸ್ಥಾನ ಅಥವಾ ದೇವರ ವಿರುದ್ಧ ಅಪಚಾರ ಮಾಡಿಲ್ಲ. ಅವರು ಸ್ವತಃ ದೇವಸ್ಥಾನದ ಭಕ್ತರಾಗಿದ್ದು ದೇವಸ್ಥಾನದ ಕುರಿತು ಅಪಾರ ನಂಬಿಕೆ ಭಕ್ತಿ ಶ್ರದ್ಧೆ ಹೊಂದಿರುತ್ತಾರೆ. ಅವರು ಮಾನ್ಯ ನ್ಯಾಯಾಲಯದ ಆದೇಶಗಳನ್ನು ಗೌರವಯುತವಾಗಿ ಪಾಲಿಸುತ್ತಾರೆ ಎಂದು ವಾದ ಮಂಡಿಸಿದರು. ನ್ಯಾಯವಾದಿ ರಾಜವರ್ಧನ್ ರೆಡ್ಡಿ ಹಾಗೂ ಗೌರವ್ ಜೊತೆಗಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version