Home ಅಪರಾಧ ಲೋಕ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಧನ; ಬೆಳ್ತಂಗಡಿ ತಾಲೂಕಿನ ಕಾಶೀಪಟ್ಣದಲ್ಲಿ ಅಂತ್ಯಸಂಸ್ಕಾರ

ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಧನ; ಬೆಳ್ತಂಗಡಿ ತಾಲೂಕಿನ ಕಾಶೀಪಟ್ಣದಲ್ಲಿ ಅಂತ್ಯಸಂಸ್ಕಾರ

5
0

ಮಂಗಳೂರು; ದ.ಕ. ಜಿಲ್ಲಾ ಖಾಝಿ, ಹಿರಿಯ ವಿದ್ವಾಂಸ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್(78) ಇಂದು (ಜೂ.23) ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲವು ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವಿರಾರು ಜನ ಶಿಷ್ಯವೃಂದ‌ಹಾಗೂ ಅವರ ಅಭಿಮಾನಿಗಳ ಪ್ರಾರ್ಥನೆಯ ಹೊರತಾಗಿಯೂ ಅವರು ಮಂಗಳವಾರದಂದು ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಬಂಧುಬಳಗವನ್ನು ಅಗಲಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ
ಮಂಗಳೂರು ಕೇಂದ್ರ ಜುಮಾ ಮಸ್ಜಿದ್‌ ಗೆ ತರೊಅಗಿದ್ದು ಅಲ್ಲಿ ಮೃತದೇಹದ ಸ್ನಾನ ಹಾಗೂ ಇತರ ವಿಧಿಗಳನ್ನು ಪೂರೈಸಿ ಮಯ್ಯತ್ ನಮಾಝ್ ಗೈದು ಬಳಿಕ ಅವರ ಊರಾದ ಕಾಸರಗೋಡಿಗೆ ಕೊಂಡೊಯ್ಯಲಾಗುವುದು. ಅಲ್ಲಿ ಅಂತಿಮ ದರ್ಶನದ‌ ಬಳಿಕ ಬುಧವಾರ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದಲ್ಲಿ ಅವರೇ ಅಧ್ಯಕ್ಷರಾಗಿ ಕಟ್ಟಿ ಬೆಳೆಸಿದ ಬೃಹತ್ ಶಿಕ್ಷಣ ಶಮುಚ್ಛಯ ದಾರುನ್ನೂರ್ ಇಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಏರ್ಪಾಟು ಮಾಡಲಾಗಿದೆ.
ಬಳಿಕ ಅಲ್ಲೇ ಅಂತ್ಯ ಸಂಸ್ಕಾರ ಕೂಡ ನಡೆಯಲಿದೆ ಎಂದು ಅವರ ಕುಟಮಬದ ಮೂಲಗಳಿಂದ ತಿಳಿದುಬಂದಿದೆ.

ಎಸ್‌ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯಾಧ್ಯಕ್ಷ ಅಬ್ದುಲ್ ರಝಾಕ್ ಡಿ.ಡಿ ತೀವ್ರ ಸಂತಾಪ

ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಜಿಲ್ಲೆಯ ಖಾಝಿಯಾಗಿ ಸುದೀರ್ಘ ವರ್ಷ ಧಾರ್ಮಿಕ ನೇತೃತ್ವ ನೀಡಿದ್ದು ಅವರೊಬ್ಬ ಅಜೇಯ‌ನೇತಾರ. ಅವರೇ ಕಟ್ಟಿ‌ಬೆಳೆಸಿದ ದಾರುನ್ನೂರು ಶಿಕ್ಷಣ ಸಂಸ್ಥೆ ಕಾಶಿಪಟ್ಣ ಇಂದು 12 ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಅವರು ನಮ್ಮ ಸಂಘಟನೆಗೆ ನೀಡುತ್ತಿದ್ದ ನೇತೃತ್ವ ಮತ್ತು ಮಾರ್ಗದರ್ಶನದಿಂದಲೇ ಇಂದು ಸಂಘಟನೆ ಇಷ್ಟು ಎತ್ತರಕ್ಕೆ ಬೆಳೆದುನಿಲ್ಲಲು ಭದ್ರ ತಳಪಾಯವಾಗಿತ್ತು ಎಂದು ಬೆಳ್ತಂಗಡಿ ಎಸ್ಕೆಎಸ್ಸೆಸ್ಸೆಫ್ ವಲಯಾಧ್ಯಕ್ಷ ಡಿ.ಡಿ ಅಬ್ದುಲ್ ರಝಾಕ್ ಅವರು ಸೌದಿ ಅರೇಬಿಯಾ ದ ಮೆಕ್ಕಾ ದಿಂದ ತೀವ್ರ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here