Home ಅಪರಾಧ ಲೋಕ ಕಡಿರುದ್ಯಾವರದಲ್ಲಿ ಒಂಟಿ ಸಲಗನ ಓಡಾಟ

ಕಡಿರುದ್ಯಾವರದಲ್ಲಿ ಒಂಟಿ ಸಲಗನ ಓಡಾಟ

0

ಬೆಳ್ತಂಗಡಿ; ಗುರುವಾರ, ರಾತ್ರಿ ಕಡಿರುದ್ಯಾವರ ಗ್ರಾಮದ ವಿವಿದೆಡೆ ಒಂಟಿಸಲಗವೊಂದು ಓಡಾಟ ನಡೆಸಿದ್ದು ಕಂಡುಬಂದಿದೆ ಆದರೆ ಎಲ್ಲಿಯೂ ಹೆಚ್ಚಿನ ಕೃಷಿಗೆ ಹಾನಿಯುಂಟುಮಾಡಿಲ್ಲ. ಕಡಿರುದ್ಯಾವರ ಗ್ರಾಮದ ಮಿತ್ತಕಟ್ಟಾಜೆ, ಜೋಡು ನೇರಳೆ ಪರಿಸರದಲ್ಲಿ ಒಂಟಿ ಸಲಗವು ಸಂಚರಿಸಿದ್ದು ಮಿತ್ತಕಟ್ಟಾಜೆಯ ಪ್ರವೀಣ್ ಕುಮಾರ್ ಮೋಹನ್ ನಾಯ್ಕ ಮಹೇಶ್ ಭಟ್ ಇವರ ಕೃಷಿ ಭೂಮಿಯಲ್ಲಿ ಸಂಚಾರ ಮಾಡಿದೆ. ಅದೇ ರೀತಿ ಜೋಡು ನೇರಳೆ ಮಚ್ಚೇಂದ್ರನಾಯಕ್ ಇವರ ತೋಟದಲ್ಲಿರುವ ಹಲಸಿನ ಹಣ್ಣು ಇತ್ಯಾದಿ ವಸ್ತುಗಳನ್ನು ತಿಂದು ಕಾಡಿನ ಕಡೆಗೆ ತೆರಳಿರುವ ಬಗ್ಗೆ‌ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಾಡಾನೆ ಯಾವುದೇ ಕೃಷಿಗೆ ಹಾನಿಯುಂಟು ಮಾಡಿಲ್ಲ .

NO COMMENTS

LEAVE A REPLY

Please enter your comment!
Please enter your name here

Exit mobile version