ಬೆಳ್ತಂಗಡಿ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂದಾರು ಇಲ್ಲಿನ
143 ವಿದ್ಯಾರ್ಥಿಗಳಿಗೆ
“ಬದುಕು ಕಟ್ಟೋಣ ಬನ್ನಿ ” ತಂಡದ ಸಂಚಾಲಕ, ಉಜಿರೆ ಲಕ್ಷ್ಮಿ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಮಾಲಕರಾದ ಮೋಹನ್ ಕುಮಾರ್ ಅವರು
ಸ್ಕೂಲ್ ಬ್ಯಾಗ್ ಮತ್ತು ಕೊಡೆ ವಿತರಣೆ ಮಾಡಿದರು.
ಈ ಸಂದರ್ಭ
“ಬದುಕು ಕಟ್ಟೋಣ ಬನ್ನಿ” ತಂಡದ ಸಂಚಾಲಕ ಮೋಹನ್ ಕುಮಾರ್ ಅವರು ಪುಸ್ತಕ ಸ್ಕೂಲ್ ಬ್ಯಾಗ್ ಮತ್ತು ಕೊಡೆ ವಿತರಿಸಿ ಮಾತನಾಡಿ
ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯಬೇಕು, ಕೇವಲ ಅಂಕಗಳಿಗಾಗಿ ಕಲಿಯುವುದಲ್ಲ, ವಿದ್ಯಾರ್ಥಿಗಳು ಸಂಸ್ಕಾರಯುತರಾಗಿ ಬದುಕಬೇಕು, ವಿದ್ಯಾವಂತರಾಗಿ
ಮಾದರಿ ವ್ಯಕ್ತಿತ್ವ ಬೆಳೆಸಿಕೊಂಡು ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿ ಇದೇ ರೀತಿ ಬಡತನ, ಕಷ್ಟದಲ್ಲಿ ಇರುವವರಿಗೆ ಶಿಕ್ಷಣಕ್ಕೆ ಸಹಾಯ ಮಾಡುವ ಮೂಲಕ ನೊಂದವರಸೇವೆ ಮಾಡಬೇಕು ಎಂದು ಆಶಿಸುತ್ತಾ ಶುಭ ಹಾರೈಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷ
ಉಮೇಶ್ ಗೌಡ ಗ್ರಾ.ಪಂ. ಮಾಜಿ ಸದಸ್ಯೆವಿಮಲಾ , ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಪಾಂಜಾಳ,
ನವೀನ್ ಕುಮಾರ್
ಇದ್ದರು.
ವಿದ್ಯಾರ್ಥಿನಿಯರಾದ
ಅಪೇಕ್ಷ, ವೇದಿಕಾ,
ತನ್ವಿ, ತನುಶ್ರೀ ಪ್ರಾರ್ಥಿಸಿದರು.
ಸಹ ಶಿಕ್ಷಕ ರಫೀಕ್ ಸ್ವಾಗತಿಸಿ
ಮುಖ್ಯೋಪಾಧ್ಯಾಯ ವಿಶ್ವನಾಥ ಎಂ.ಯು.ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹ ಶಿಕ್ಷಕಮೋಹನ್ ವೈ.ಇ. ಕಾರ್ಯಕ್ರಮ ನಿರೂಪಿಸಿ
ಸಹ ಶಿಕ್ಷಕಿ ರೇಖಾ ವಂದಿಸಿದರು.
ಎಸ್ ಡಿ ಎಂ ಸಿ ಸದಸ್ಯರು,
ಪೋಷಕರು
ಶಿಕ್ಷಕ ವೃಂದದವರು ಪಾಲ್ಗೊಂಡರು.
