Home ಅಪರಾಧ ಲೋಕ ಮಂಗಳೂರು: 42.7 ಕೆಜಿ ಆನೆದಂತ ವಶ, ಪುದುವೆಟ್ಟಿನ ವ್ಯಕ್ತಿ ಸೇರಿದಂತೆ ಮೂವರ ಬಂಧನ

ಮಂಗಳೂರು: 42.7 ಕೆಜಿ ಆನೆದಂತ ವಶ, ಪುದುವೆಟ್ಟಿನ ವ್ಯಕ್ತಿ ಸೇರಿದಂತೆ ಮೂವರ ಬಂಧನ

0

ಮಂಗಳೂರು: ಅಕ್ರಮವಾಗಿ ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸುವಲ್ಲಿ ಸಿಐಡಿ ಅರಣ್ಯ ಘಟಕ ಯಶಸ್ವಿಯಾಗಿದ್ದು ಮೂವರನ್ನು ಬಂಧಿಸಿದ್ದಾರೆ‌ ಆರೋಪಿಗಳಿಂದ ಬಂಧಿಸಿದ್ದು, 42.7 ಕೆಜಿ ತೂಕದ ಎರಡು ಆನೆದಂತ ಹಾಗೂ ಸಾಗಾಟಕ್ಕೆ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಮನನ ನಿವಾಸಿ ಶಶಾಂಕ್ ಪುದುವೆಟ್ಟು, ಅಬ್ದುಲ್ ಖಾದರ್ ಮಂಜೇಶ್ವರ, ಹಾಗೂ ಪ್ರಭಾಚಂದ್ರ ಅತ್ತಾವರ, ಮಂಗಳೂರು ಎಂಬವರಾಗಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಎರಡು ಆನೆದಂತಗಳ ಒಟ್ಟು ತೂಕ 42.7 ಕೆಜಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಅಕ್ರಮ ಸಾಗಾಟಕ್ಕೆ ಬಳಸಲಾಗಿದ್ದ ಎರಡು ಕಾರುಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಮಂಗಳೂರು ನಗರದ ಪಡವು ಗ್ರಾಮದ ಮಾರೋಳಿ ಜೋಡುಕಟ್ಟೆ ಬಳಿ ಗುರುವಾರ ಆನೆದಂತ ಮಾರಾಟ ಮಾಡಲು ಕೆಲವು ವ್ಯಕ್ತಿಗಳು ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಸಿಐಡಿ ಅರಣ್ಯ ಘಟಕಕ್ಕೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ, ಸ್ಥಳದ ಮೇಲೆ ಜಂಟಿ ದಾಳಿ ನಡೆಸಿ ದಂತಗಳನ್ನು ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿದ್ದ ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕದ ಎಸ್‌ಪಿ ಪವನ್ ನೆಜ್ಜೂರ್ ಮಂಗಳೂರು ಸಿಐಡಿ ಅರಣ್ಯ ಮೊಬೈಲ್ ಸ್ಕ್ವಾಡ್‌ನ ಪಿಎಸ್‌ಐ ದಿಲೀಪ್ ಜಿ.ಆರ್ ಸಿಬ್ಬಂದಿಗಳಾದ ಜಯರಾಮ್ ಕೆ.ಟಿ, ಬಾಲಕೃಷ್ಣ ಕೆ.ಎಂ, ತಾರಾನಾಥ್ ಎಸ್ ಹಾಗೂ ಅಬ್ದುಲ್ ರಫೀಕ್ ಸಕ್ರಿಯವಾಗಿ ಪಾಲ್ಗೊಂಡಿದ್ಧರು. ಬಂಧಿತ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act) ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ದಂತಗಳನ್ನು ಎಲ್ಲಿಂದ ತರಲಾಗಿತ್ತು? ಇದರ ಹಿಂದೆ ಬೇರೆ ಯಾವುದಾದರೂ ಅಂತಾರಾಜ್ಯ ದಂಧೆಕೋರರ ಕೈವಾಡವಿದೆಯೇ? ಎಂಬ ಬಗ್ಗೆ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ
ತೀವ್ರ ವಿಚಾರಣೆ ನಡೆಸುತ್ತಿದ್ದಾರೆ

NO COMMENTS

LEAVE A REPLY

Please enter your comment!
Please enter your name here

Exit mobile version